alex Certify
ಕನ್ನಡ ದುನಿಯಾ       Mobile App
       

Kannada Duniya

ಹನಿಮೂನ್ ನ ಎರಡನೇ ದಿನವೇ ಪತ್ನಿಗೆ ಹೊಡೆದಿದ್ದ ಪತಿ…!

ಲುಫ್ತಾನ್ಸಾ ಏರ್ಲೈನ್ಸ್ ಗಗನಸಖಿ ಅನಿಶಿಯಾ ಸಾವಿನ ಬಗ್ಗೆ ಆಳವಾದ ತನಿಖೆ ಮುಂದುವರೆದಿದೆ. ತಾಜಾ ವರದಿ ಪ್ರಕಾರ ಅನಿಶಿಯಾ ಹಾಗೂ ಪತಿ ಮಯಂಕ್ ದುಬೈನಲ್ಲಿ ಹನಿಮೂನ್ ಗೆ ತೆರಳಿದ್ದರು. ಇಬ್ಬರ ನಡುವೆ ಸಂಬಂಧ ಹಳಸಿದ್ದು ಇಲ್ಲೇ ಎಂದು ಮೂಲಗಳು ಹೇಳಿವೆ.

ಮಾಧ್ಯಮಗಳ ವರದಿ ಪ್ರಕಾರ ಮಯಂಕ್ ದುಬೈನಲ್ಲಿ ಹನಿಮೂನ್ ನ ಎರಡನೇ ದಿನ ಅನಿಶಿಯಾಗೆ ಹೊಡೆದಿದ್ದನಂತೆ. ಇದ್ರಿಂದ ಕೋಪಗೊಂಡ ಅನಿಶಿಯಾ ಮಯಂಕ್ ನನ್ನು ಅಲ್ಲಿಯೇ ಬಿಟ್ಟು ಭಾರತಕ್ಕೆ ವಾಪಸ್ ಬಂದಿದ್ದಳಂತೆ. ಇದಾದ ನಂತ್ರ ಇಬ್ಬರ ಮಧ್ಯೆ ಬಿಕ್ಕಟ್ಟು ಹೆಚ್ಚಾಗಿತ್ತಂತೆ. ಚಂಡೀಗಢದಿಂದ ದೆಹಲಿಗೆ ಬಂದಿದ್ದ ಅನಿಶಿಯಾ ಕುಟುಂಬಸ್ಥರು ಸಂಧಾನಕ್ಕೆ ಯತ್ನಿಸಿದ್ದರಂತೆ.

ಅನಿಶಿಯಾ ತಾಯಿ ಈ ಎಲ್ಲ ವಿಚಾರವನ್ನು ಪೊಲೀಸರಿಗೆ ಹೇಳಿದ್ದಾಳೆ. ತಾಯಿ ಹೇಳಿಕೆ ಮೇರೆಗೆ ಪೊಲೀಸರು ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ. ಮಯಂಕ್ ವಿಚ್ಛೇದಿತ ಎಂಬ ವಿಚಾರವನ್ನು ಗೌಪ್ಯವಾಗಿ ಇಡಲಾಗಿತ್ತಂತೆ. ಹಣಕ್ಕಾಗಿ ಮಯಂಕ್ ಬೇಡಿಕೆಯಿಡುತ್ತಿದ್ದ ಎಂದು ಅನಿಶಿಯಾ ತಾಯಿ ಹೇಳಿದ್ದಾಳೆ. ಇದು ಕೊಲೆಯೇ ಅಥವಾ ಆತ್ಮಹತ್ಯೆಯೇ ಎನ್ನುವ ಬಗ್ಗೆ ಪೊಲೀಸರಿಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...