alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆ ಮೇಲೆ ಬಿತ್ತು ವಿಮಾನದ ಬಾಗಿಲು

ತೆಲಂಗಾಣದಲ್ಲಿ ಕೆಳಮಟ್ಟದಲ್ಲಿ ಹಾರುತ್ತಿದ್ದ ವಿಮಾನವೊಂದರ ಬಾಗಿಲು ಮುರಿದು ಮನೆಯೊಂದರ ಟೆರೆಸ್ ಮೇಲೆ ಬಿದ್ದಿದೆ. ಈ ಅವಘಡದಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ. ಸಿಕಂದರಾಬಾದ್ ನ ಗಣೇಶ್ ಯಾದವ್ ಎಂಬುವವರ ಮನೆ ಮೇಲೆ ವಿಮಾನದ ಬಾಗಿಲು ಅಪ್ಪಳಿಸಿದೆ.

ಆ ಸಮಯದಲ್ಲಿ ಗಣೇಶ್ ಟೆರೆಸ್ ಮೇಲೆ ಇದ್ರು, ಊಟಕ್ಕೆ ಅಂತಾ ಕೆಳಗಿಳಿಯುತ್ತಿದ್ದಂತೆ ವಿಮಾನದ ಬಾಗಿಲು ಬಿದ್ದಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತೆಲಂಗಾಣ ರಾಜ್ಯ ವಿಮಾನಯಾನ ಅಕಾಡೆಮಿಗೆ ಸೇರಿದ ವಿಮಾನ ಇದಾಗಿದೆ.

ವಿಮಾನ ಹಾರಾಟದ ತರಬೇತಿ ನಡೆಯುತ್ತಿತ್ತು. ನೆಲದಿಂದ ಕೇವಲ 2500 ಅಡಿ ಎತ್ತರದಲ್ಲಿ ವಿಮಾನ ಹಾರುತ್ತಿತ್ತು. ವಿಮಾನದಲ್ಲಿ ತರಬೇತಿ ಹಂತದಲ್ಲಿದ್ದ ಪೈಲಟ್ ಇದ್ದ. ಈ ಘಟನೆ ಬಗ್ಗೆ ತನಿಖೆಗೆ ಡಿಜಿಸಿಎ ನಿರ್ದೇಶಕರು ಆದೇಶ ನೀಡಿದ್ದಾರೆ. ಮೇಲಿನಿಂದ ಬಿದ್ದ ರಭಸಕ್ಕೆ ವಿಮಾನದ ಮೆಟಲ್ ಡೋರ್ ನ ಗಾಜು ಮಾತ್ರ ಒಡೆದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...