alex Certify
ಕನ್ನಡ ದುನಿಯಾ       Mobile App
       

Kannada Duniya

ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದೆ ದೊಡ್ಡ ದುರಂತ

ಚೆನ್ನೈ: ಪೈಲಟ್ ಗಳ ಸಮಯಪ್ರಜ್ಞೆಯಿಂದಾಗಿ ನಡೆಯಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದ ಘಟನೆ ಇತ್ತೀಚೆಗೆ ನಡೆದಿದೆ.

ಚೆನ್ನೈ ವಿಮಾನ ನಿಲ್ದಾಣದ ಮೊದಲನೇ ರನ್ ವೇನಲ್ಲಿ ಪ್ರಗತಿ ಕಾಮಗಾರಿ ನಡೆಯುತ್ತಿತ್ತು. ಹೀಗಾಗಿ ಭಾರತ ವಿಮಾನ ನಿಲ್ದಾಣಗಳ ಪ್ರಾಧಿಕಾರ ಮಧ್ಯಾಹ್ನ 12.30 ರಿಂದ ಸಂಜೆ 6.30 ರವರೆಗೆ ಮೊದಲನೇ ರನ್ ವೇ ನಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನಗಳು ಎರಡನೇ ರನ್ ವೇ ನಲ್ಲಿ ಲ್ಯಾಂಡ್ ಆಗುವಂತೆ ಸೂಚಿಸಿತ್ತು.

ಇದರಂತೆ ವಿಮಾನ ನಿಲ್ದಾಣದ ಒಂದನೇ ಟ್ರ್ಯಾಕ್ ನಲ್ಲಿ ಲ್ಯಾಂಡ್ ಆಗಬೇಕಿದ್ದ ಇಂಡಿಗೋ ಎ320 ಏರ್ ಕ್ರಾಫ್ಟ್ ಎರಡನೇ ಟ್ರ್ಯಾಕ್ ನಲ್ಲಿ ಇಳಿಯಲು ತಯಾರಿ ನಡೆಸಿತ್ತು.

ಆದರೆ ಇನ್ನೇನು ಲ್ಯಾಂಡ್ ಆಗಲು ಕೆಲವೇ ಕ್ಷಣಗಳಿರುವಾಗ ಎರಡನೇ ಟ್ರ್ಯಾಕ್ ಬಳಿ ಒಂದನೇ ಟ್ರ್ಯಾಕ್ ನಲ್ಲಿ ಕಾಮಗಾರಿ ನಡೆಸುತ್ತಿದ್ದ ವಾಹನ ಓಡಾಡುತ್ತಿದ್ದುದನ್ನು ಗಮನಿಸಿದ ವಿಮಾನದ ಪೈಲಟ್ ತಕ್ಷಣ ಭೂಸ್ಪರ್ಷವನ್ನು ತಪ್ಪಿಸಿ ವಿಮಾನವನ್ನು ಮತ್ತೆ ಆಗಸದೆಡೆಗೆ ಚಿಮ್ಮಿಸಿದ್ದಾರೆ.

ತಕ್ಷಣ ಏರ್ ಕಂಟ್ರೋಲ್ ರೂಂಗೆ ವಿಷಯವನ್ನು ತಿಳಿಸಿದ್ದು ರನ್ ವೇ ಕ್ಲೀಯರ್ ಆದ ಬಳಿಕ ಲ್ಯಾಂಡ್ ಮಾಡಿದ್ದಾರೆ. ನಡೆಯಬಹುದಾಗಿದ್ದ ಬಹುದೊಡ್ಡ ದುರಂತ ಕ್ಷಣಾರ್ಧದಲ್ಲಿ ತಪ್ಪಿಹೋಗಿದ್ದು, ಪೈಲಟ್ ಸಮಯ ಪ್ರಜ್ಞೆ ಪ್ರಶಂಸೆಗೆ ಪಾತ್ರವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...