alex Certify
ಕನ್ನಡ ದುನಿಯಾ       Mobile App
       

Kannada Duniya

ಆಟೋ ರಿಕ್ಷಾಕ್ಕಿಂತ್ಲೂ ವಿಮಾನ ಪ್ರಯಾಣವೇ ಅಗ್ಗ…!

ವಿಮಾನ ಪ್ರಯಾಣ, ಆಟೋ ರಿಕ್ಷಾಗಿಂತ್ಲೂ ಅಗ್ಗ ಅಂತಾ ವಿಮಾನಯಾನ ಸಚಿವ ಜಯಂತ್ ಸಿನ್ಹಾ ಹೇಳಿದ್ದಾರೆ. ಇಂದೋರ್ ನಲ್ಲಿ ಮಾತನಾಡಿದ ಅವರು ಭಾರತದಲ್ಲಿ ಈಗ ವಿಮಾನಯಾನಕ್ಕಿಂತ್ಲೂ ಆಟೋ ರಿಕ್ಷಾ ದುಬಾರಿ. ನಾನು ನಾನ್ಸೆನ್ಸ್ ಮಾತನಾಡುತ್ತಿದ್ದೇನೆಂದು ಕೆಲವರು ಅಂದುಕೊಳ್ಳಬಹುದು, ಆದ್ರೆ ಇದು ಸತ್ಯ ಎಂದಿದ್ದಾರೆ.

ಇಂದೋರ್ ನಿಂದ ದೆಹಲಿಗೆ ವಿಮಾನದಲ್ಲಿ ಪ್ರಯಾಣಿಸಲು ಪ್ರತಿ ಕಿಮೀಗೆ 5 ರೂಪಾಯಿ ವೆಚ್ಚ ಮಾಡುತ್ತಾರೆ. ಆದ್ರೆ ನಗರದಲ್ಲಿ ಸುತ್ತಾಡಲು ಆಟೋ ಏರಿದ್ರೆ ಪ್ರತಿ ಕಿಲೋಮೀಟರ್ ಗೆ 8-10 ರೂಪಾಯಿ ಖರ್ಚಾಗುತ್ತದೆ ಅಂತಾ ಲೆಕ್ಕ ಕೊಟ್ಟಿದ್ದಾರೆ.

ಇದೇ ಕಾರಣಕ್ಕೆ ದೇಶದಲ್ಲಿ ಬಹುತೇಕ ಜನ ವಿಮಾನ ಪ್ರಯಾಣವನ್ನು ನೆಚ್ಚಿಕೊಂಡಿದ್ದಾರೆ ಅನ್ನೋದು ಸಚಿವರ ಅಭಿಪ್ರಾಯ. 4 ವರ್ಷಗಳ ಹಿಂದೆ 11 ಕೋಟಿ ಜನರು ವಿಮಾನದಲ್ಲಿ ಪ್ರಯಾಣಿಸುತ್ತಿದ್ರು, ಆದ್ರೆ ಈಗ 20 ಕೋಟಿ ಜನರು ವಿಮಾನವೇರ್ತಿದ್ದಾರೆ ಅಂತಾ ಮಾಹಿತಿ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...