alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಯಡವಟ್ಟು

cone belt

ನವದೆಹಲಿ: ವಿಮಾನದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಸ್ವಲ್ಪ ಮಾಹಿತಿಯನ್ನಾದರೂ ತಿಳಿದುಕೊಳ್ಳಬೇಕು ಇಲ್ಲದಿದ್ದರೆ, ಹೇಗೆಲ್ಲಾ ನಗೆಪಾಟಲಿಗೆ ಈಡಾಗಬೇಕಾಗುತ್ತದೆ ಎಂಬುದಕ್ಕೆ ಇಲ್ಲಿದೆ ನೋಡಿ ಉದಾಹರಣೆ. ಮೊದಲ ಬಾರಿಗೆ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕ ಅವಾಂತರ ಸೃಷ್ಠಿಸಿದ್ದಾನೆ.

ರಾಜ್ ಕುಮಾರ್ ಯಾದವ್ ಎಂಬ ಪ್ರಯಾಣಿಕ ಕಳೆದ ಶುಕ್ರವಾರ ನವದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನನಿಲ್ದಾಣದಿಂದ ಏರ್ ಇಂಡಿಯಾ ವಿಮಾನದಲ್ಲಿ ರಿಹಾದ್ ಗೆ ಹೊರಟಿದ್ದ. ಆತ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಲಗೇಜ್ ಸಾಗಿಸುವ ಕಾನ್ವೆಯರ್ ಬೆಲ್ಟ್ ನಲ್ಲಿ ಕುಳಿತು ಬಿಟ್ಟಿದ್ದಾನೆ. ಬಹುಶಃ ಅದು ವಿಮಾನ ನಿಲ್ದಾಣದಲ್ಲಿರುವ ಎಸ್ಕಲೇಟರ್ ಎಂದು ಭಾವಿಸಿದ್ದನೇನೋ?. ಅದರಲ್ಲೇ ಕುಳಿತು ಮುಂದೆ ಸಾಗಿದ್ದಾನೆ. ಅದು ಲಗೇಜ್ ಸ್ಕ್ಯಾನ್ ಮಾಡುವ ಯಂತ್ರದ ಬಳಿ ಬಂದಿದೆ.

ಅಷ್ಟರಲ್ಲೇ ಇದನ್ನು ಗಮನಿಸಿದ ನಿಲ್ದಾಣದ ಸಿಬ್ಬಂದಿ ಆತನನ್ನು ಹೊರಗೆಳೆದುಕೊಂಡಿದ್ದಾರೆ. ಇಲ್ಲದಿದ್ದರೆ, ಆತನ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇತ್ತು ಎನ್ನಲಾಗಿದೆ. ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಇದೇ ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಆತನಿಗೆ ನಿಲ್ದಾಣದಲ್ಲಿ ಕಾನ್ವೆಯರ್ ಬೆಲ್ಟ್ ಬಗ್ಗೆ ಗೊತ್ತಿರಲಿಲ್ಲ ಎಂಬುದು ಗಮನಕ್ಕೆ ಬಂದಿದೆ. ಇಷ್ಟೆಲ್ಲಾ ನಡೆಯುವ ಹೊತ್ತಿಗೆ ಆತ ಹೋಗಬೇಕಿದ್ದ ವಿಮಾನ ಹೋಗಿಯಾಗಿತ್ತು. ಆತನಿಗೆ ಬೇರೆ ವಿಮಾನದಲ್ಲಿ ರಿಹಾದ್ ಗೆ ಕಳುಹಿಸಲಾಗಿದೆ

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...