alex Certify
ಕನ್ನಡ ದುನಿಯಾ       Mobile App
       

Kannada Duniya

ಜಗನ್ನಾಥ ದೇಗುಲದಲ್ಲಿ ಮಾಂಸಹಾರ ನೀಡಲಾಗುತ್ತದೆಂದ ಮ್ಯಾಗಜೀನ್

puri-jagannatha-shubh-magzineಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರಿಗಾಗಿ ನೀಡಲಾಗುವ ಭಾರತದ ಧಾರ್ಮಿಕ ಹಾಗೂ ಪ್ರವಾಸಿ ಕ್ಷೇತ್ರಗಳ ಮಾಹಿತಿ ಒದಗಿಸುವ ಮ್ಯಾಗಜೀನ್ ‘ಶುಭ್ ಯಾತ್ರಾ’ ದಲ್ಲಿ ಪ್ರಸಿದ್ದ ಪುರಿ ಜಗನ್ನಾಥ ದೇಗುಲದ ಕುರಿತು ತಪ್ಪು ಮಾಹಿತಿ ನೀಡಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಮ್ಯಾಗಜೀನ್ ನಲ್ಲಿ ಪುರಿ ಜಗನ್ನಾಥ ದೇಗುಲದ ಕುರಿತಂತೆ ನೀಡಲಾಗಿರುವ ಮಾಹಿತಿಯಲ್ಲಿ, 500 ಮಂದಿ ಅಡುಗೆಯವರು ಹಾಗೂ 300 ಮಂದಿ ಸಹಾಯಕರು ಪ್ರತಿನಿತ್ಯ ಲಕ್ಷಾಂತರ ಮಂದಿಗೆ ಸಸ್ಯಾಹಾರ ಹಾಗೂ ಮಾಂಸಹಾರವನ್ನು ಬಡಿಸುತ್ತಾರೆ ಎಂದು ತಿಳಿಸಲಾಗಿದೆ.

ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಇಂತಹ ತಪ್ಪು ಮಾಹಿತಿ ನೀಡಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದ್ದು, ‘ಜಗನ್ನಾಥ ಸೇನಾ’ ಎಂಬ ಸ್ಥಳೀಯ ಸಂಘಟನೆ, ದೇಗುಲದ ಮುಂದೆ ಪ್ರತಿಭಟನೆ ನಡೆಸಿ ಪ್ರಮಾದವೆಸಗಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...