alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನ ಪ್ರಯಾಣಿಕರ ಆಹಾರಕ್ಕೂ ಕೈ ಹಾಕಿದ್ಲು ಈಕೆ

420962-air-india

ನೌಕರಿಯಲ್ಲಿರುವ ಕೆಲವರು ಅಲ್ಲಿನ ಕೆಲ ವಸ್ತುಗಳನ್ನು ತಮ್ಮ ಖಾಸಗಿ ಆಸ್ತಿಯಂತೆ ಬಳಸಿಕೊಳ್ಳುವುದನ್ನು ನೋಡಿದ್ದೇವೆ. ಕಛೇರಿಯ ಫೈಲ್, ಪೆನ್ ಸೇರಿದಂತೆ ಹಲವು ಸಾಮಗ್ರಿಗಳನ್ನು ಎಗ್ಗಿಲ್ಲದೇ ಮನೆಗೆ ಸಾಗಿಸುತ್ತಾರೆ. ಅಂತಹುದೇ ಪ್ರಕರಣವೊಂದು ಈಗ ಬೆಳಕಿಗೆ ಬಂದಿದೆ.

ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ವಿಮಾನದ ಸಿಬ್ಬಂದಿಯೊಬ್ಬಳು ವಿಮಾನ ಪ್ರಯಾಣಿಕರಿಗೆಂದು ಮೀಸಲಾಗಿಟ್ಟಿರುತ್ತಿದ್ದ ಆಹಾರಕ್ಕೇ ಕೈ ಹಾಕಿದ್ದಾಳೆ. ಗೋಡಂಬಿ, ಡ್ರೈ ಫ್ರೂಟ್ಸ್, ಹಾಲಿನ ಪಾಕೀಟ್, ವಿಸ್ಕಿ ಬಾಟಲ್ ಗಳನ್ನು ಸದ್ದಿಲ್ಲದೇ ಸಾಗಿಸುವ ವೇಳೆ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗಳ ಕೈಗೆ ಸಿಕ್ಕಿ ಬಿದ್ದಿದ್ದಾಳೆ.

ಕೋಲಂಬೋದಿಂದ ಬಂದಿಳಿದ ಏರ್ ಇಂಡಿಯಾ AI 274 ವಿಮಾನದ ಮಹಿಳಾ ಸಿಬ್ಬಂದಿ ಅನುಮಾನಾಸ್ಪದವಾಗಿ ವರ್ತಿಸಿದ ಕಾರಣ ಆಕೆಯನ್ನು ತಪಾಸಣೆಗೊಳಪಡಿಸಲಾಗಿದೆ. ಈ ವೇಳೆ ಆಕೆಯ ಬ್ಯಾಗಿನಲ್ಲಿ ಪ್ರಯಾಣಿಕರಿಗೆ ನೀಡಲೆಂದು ಮೀಸಲಿಟ್ಟಿದ್ದ ಆಹಾರ ಸಾಮಗ್ರಿಗಳು ಪತ್ತೆಯಾಗಿದೆ. ಬಹು ಕಾಲದಿಂದಲೂ ಈಕೆ ಈ ಕೆಲಸ ಮಾಡುತ್ತಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ತನಿಖೆ ನಡೆಸಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...