alex Certify
ಕನ್ನಡ ದುನಿಯಾ       Mobile App
       

Kannada Duniya

ಸಂದಿಗ್ದ ಪರಿಸ್ಥಿತಿಯಲ್ಲಿ ವಾಯುಸೇನೆ ಮಾಡಿದೆ ಮಹತ್ವದ ಕಾರ್ಯ

rs-2000-notes-344ದೇಶಾದ್ಯಂತ 500 ಹಾಗೂ 1000 ರೂ. ನೋಟುಗಳ ಚಲಾವಣೆ ನಿಷೇಧಗೊಳ್ಳುತ್ತಿದ್ದಂತೆಯೇ ತಮ್ಮಲ್ಲಿರುವ ನೋಟುಗಳ ಬದಲಾವಣೆಗಾಗಿ ಹಾಗೂ ಹಣ ಪಡೆಯಲು ಸಾರ್ವಜನಿಕರು ಬ್ಯಾಂಕ್ ಹಾಗೂ ಎಟಿಎಂ ಗಳ ಮುಂದೆ ಸಾಲುಗಟ್ಟಿ ನಿಂತಿದ್ದರು.

ಸಕಾಲಕ್ಕೆ ಹಣ ಸಾಗಿಸಲು ಹಾಗೂ ಆ ಮೂಲಕ ಸಾರ್ವಜನಿಕರಿಗಾಗುತ್ತಿದ್ದ ಅನಾನುಕೂಲತೆಯನ್ನು ತಪ್ಪಿಸಲು ಕೇಂದ್ರ ಸರ್ಕಾರ, ಹಣ ಸಾಗಾಟಕ್ಕೆ ವಾಯುಸೇನೆಯ ಹೆಲಿಕಾಪ್ಟರ್ ಹಾಗೂ ವಿಮಾನಗಳನ್ನು ಬಳಸಿಕೊಂಡಿತ್ತು.

ಈಶಾನ್ಯ ರಾಜ್ಯಗಳ ಗುಡ್ಡಗಾಡು ಪ್ರದೇಶಕ್ಕೆ ಹಣ ಸಾಗಿಸಲು ಈ ಹಿಂದೆಯೇ ವಾಯುಸೇನೆಯ ಹೆಲಿಕಾಪ್ಟರ್ ಗಳನ್ನು ಬಳಸಿಕೊಳ್ಳಲಾಗಿತ್ತಾದರೂ ಇದೇ ಮೊದಲ ಬಾರಿಗೆ ವಾಯುಸೇನೆಯ ವಿಮಾನಗಳೂ ಸಾರ್ವಜನಿಕರ ಅವಶ್ಯಕತೆಗೆ ಸ್ಪಂದಿಸಲು ಮುಂದಾಗಿದ್ದವು. ವಾಯುಸೇನೆ ಇದುವರೆಗೂ 160 ಟನ್ ಗಳಷ್ಟು ಹೊಸ ನೋಟುಗಳನ್ನು ದೇಶಾದ್ಯಂತ ಸರಬರಾಜು ಮಾಡಿದೆ ಎನ್ನಲಾಗಿದ್ದು, ಈ ಕಾರಣಕ್ಕಾಗಿಯೇ ಸಾರ್ವಜನಿಕರಿಗೆ ಸಕಾಲಕ್ಕೆ ಹಣ ದೊರೆಯಲು ಸಾಧ್ಯವಾಗಿದೆ. ರಿಸರ್ವ್ ಬ್ಯಾಂಕ್ ನ ನಾಲ್ಕು ಪ್ರಿಂಟಿಂಗ್ ಪ್ರೆಸ್ ಗಳ ತಾಣಗಳಿಂದ ದೇಶದ ಎಲ್ಲ ರಾಜ್ಯಗಳಿಗೂ ಹೊಸ ನೋಟು ಸಾಗಿಸಲು ಭಾರತೀಯ ವಾಯುಸೇನೆ ನೆರವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...