alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಪ್ರಯಾಣಿಕರನ್ನು ಕೆಳಗಿಳಿಸಲು ಎಸಿ ಹೆಚ್ಚಿಸಿದ ವಿಮಾನ ಚಾಲಕ

ಪ್ರಯಾಣಿಕರ ಜೊತೆ ಏರ್ ಏಷ್ಯಾ ಇಂಡಿಯಾ ವಿಮಾನ ಸಿಬ್ಬಂದಿ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಪಶ್ಚಿಮ ಬಂಗಾಳದ ಕೊಲ್ಕತ್ತಾದಿಂದ ಬಾಗ್ದೋಗ್ರಕ್ಕೆ ಹೋಗ್ತಿದ್ದ ಏರ್ ಏಷ್ಯಾ ಇಂಡಿಯಾ ವಿಮಾನ ಸಿಬ್ಬಂದಿ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ವಿಮಾನ ಸಿಬ್ಬಂದಿ, ಪ್ರಯಾಣಿಕರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆಂದು ಆರೋಪಿಸಿದ್ದಾರೆ.

ಏರ್ ಏಷ್ಯಾ ಇಂಡಿಯಾ ವಿಮಾನ ನಾಲ್ಕು ಗಂಟೆ ತಡವಾಗಿ ಬಂದಿದೆ. ಜೊತೆಗೆ ಪ್ರಯಾಣಿಕರಿಗೆ ಸರಿಯಾದ ಆಹಾರ, ನೀರಿನ ವ್ಯವಸ್ಥೆ ಮಾಡಲಿಲ್ಲವಂತೆ. ಹೊರಗೆ ಮಳೆಯಿದ್ದರೂ ಪ್ರಯಾಣಿಕರನ್ನು ಚಾಲಕ ಬಲವಂತವಾಗಿ ಇಳಿಸಲು ಮುಂದಾಗಿದ್ದಾನಂತೆ. ಎಸಿಯನ್ನು ಹೆಚ್ಚಿಗೆ ಮಾಡಿ ಪ್ರಯಾಣಿಕರು ವಿಮಾನದಿಂದ ಕೆಳಗಿಳಿಯುವಂತೆ ಮಾಡಿದ್ದಾನಂತೆ.

ಸುಮಾರು ಒಂದೂವರೆ ಗಂಟೆಗಳ ಕಾಲ ಪ್ರಯಾಣಿಕರು ವಿಮಾನದ ಮೇಲೆಯೇ ಇದ್ದರಂತೆ. ಜೋರಾಗಿ ಮಳೆ ಬರ್ತಿದ್ದ ಕಾರಣ ಕೆಳಗಿಳಿಯಲು ನಿರಾಕರಿಸಿದ್ದಾರೆ. ಆದ್ರೆ ಚಾಲಕ ಎಸಿ ಹೆಚ್ಚಿಸಿದ್ದಾನೆ. ಇದ್ರಿಂದ ವಿಮಾನ ಒಳಗಿನ ಪರಿಸ್ಥಿತಿ ಹದಗೆಟ್ಟಿತ್ತು ಎಂದು ಪ್ರಯಾಣಿಕರು ದೂರಿದ್ದಾರೆ.

ತಾಂತ್ರಿಕ ತೊಂದರೆಯಿಂದ ವಿಮಾನ ಹಾರಾಟದಲ್ಲಿ ನಾಲ್ಕು ಗಂಟೆ ವಿಳಂಬವಾಗಿದೆ. ಈ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಕಂಪನಿ ಹೇಳಿದೆ. ಆದ್ರೆ ಎಸಿ ಏರಿಕೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...