alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಜಿ ಪ್ರಧಾನಿಗೆ ಗೌರವ ಸಲ್ಲಿಸಲು ನಿರಾಕರಿಸಿದ್ದ ಕಾರ್ಪೋರೇಟರ್ ಜೈಲು ಪಾಲು

ಮಾಜಿ ಪ್ರಧಾನಿ, ದಿ.ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಗೌರವ ಸಲ್ಲಿಸಲು ನಿರಾಕರಿಸಿ ಬಂಧನಕ್ಕೊಳಗಾಗಿದ್ದ ಔರಂಗಾಬಾದ್‌ ಪಾಲಿಕೆ ಸದಸ್ಯ ಸಯ್ಯದ್‌ ಮತೀನ್‌ ರಷೀದ್‌ ಒಂದು ವರ್ಷ ಕಾಲ ನ್ಯಾಯಾಂಗ ಬಂಧನಕ್ಕೆ ಗುರಿಯಾಗಿದ್ದಾರೆ.

ಗಲಭೆ, ಕೋಮು ಹಿಂಸೆಗೆ ಪ್ರಚೋದನೆ, ಭಯದ ವಾತಾವರಣ ಸೃಷ್ಟಿ ಹಿನ್ನಲೆಯಲ್ಲಿ ಸಯ್ಯದ್ ವಿರುದ್ಧ ಎಂಪಿಡಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಅಟಲ್‌ ಬಿಹಾರಿ ವಾಜಪೇಯಿ ನಿಧನ ಹಿನ್ನಲೆಯಲ್ಲಿ ಔರಂಗಾಬಾದ್ ಪಾಲಿಕೆಯಲ್ಲಿ ಕಳೆದ ವಾರ ಗೌರವ ಸೂಚಿಸುವ ನಿರ್ಣಯಕೈಗೊಳ್ಳಲಾಗಿತ್ತು. ಆದರೆ ಇದಕ್ಕೆ ಸಯ್ಯದ್ ತೀವ್ರ ವಿರೋಧಿಸಿದ್ದರು. ಇದರಿಂದ ಕೋಪೋದ್ರಿಕ್ತರಾದ ಬಿಜೆಪಿಯ ಕೆಲವು ಸದಸ್ಯರು ಸಯ್ಯದ್ ಮೇಲೆ ಹಲ್ಲೆ ನಡೆಸಿದ‌್ದರು. ಈ ವೇಳೆ ಪಾಲಿಕೆಯಲ್ಲಿನ ಎರಡು ಧರ್ಮದ ಸದಸ್ಯರ ನಡುವೆ ವಾಗ್ವಾದ ನಡೆದು ಕೈಕೈ ಮಿಲಾಯಿಸುವ ಹಂತ ತಲುಪಿತು.

ಈ ಪ್ರಕರಣಕ್ಕೆ ಸಂಬಂದಿಸಿದಂತೆ ಸಯ್ಯದ್‌ ಅವರನ್ನು ಸಿಟಿ ಚೌಕ್‌ ಪೊಲೀಸ್‌ ಠಾಣೆಯ ತಂಡ ಬಂಧಿಸಿತ್ತು. ಆದರೆ ಸಯ್ಯದ್ ಜಾಮೀನು ಪಡೆದು ಹರ್ಷಲ್‌ ಜೈಲಿನಿಂದ ಮಂಗಳವಾರ ಬಿಡುಗಡೆಯಾಗಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಎಂಪಿಡಿಎ ಅಡಿಯಲ್ಲಿ ಮತ್ತೆ ಬಂಧಿಸಿ, ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ಸಯ್ಯದ್, ಈ ಹಿಂದೆ ಪಾಲಿಕೆಯಲ್ಲಿ ರಾಷ್ಟ್ರಗೀತೆ ಹಾಡುವ ವಿಚಾರಕ್ಕೆ ಸಂಬಂಧಿಸಿದಂತೆಯೂ ವಿರೋಧ ವ್ಯಕ್ತಪಡಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...