alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ತನ ಕ್ಯಾನ್ಸರ್ ಇದ್ದರೂ ಗರ್ಭಪಾತಕ್ಕೆ ಒಪ್ಪಲಿಲ್ಲ ನರ್ಸ್, ಮುಂದೆ…?

ದೆಹಲಿಯ ಏಮ್ಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನರ್ಸ್ ಒಬ್ಬರು ಸಾವನ್ನಪ್ಪಿದ್ದಾರೆ. ಆಕೆ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ಲು. ಗರ್ಭಿಣಿಯಾಗಿದ್ದ ಆಕೆ ಕ್ಯಾನ್ಸರ್ ಚಿಕಿತ್ಸೆಗಾಗಿ, ಗರ್ಭಪಾತ ಮಾಡಿಸಿಕೊಳ್ಳುವಂತೆ ಸೂಚಿಸಿದ್ರೂ ಒಪ್ಪಿರಲಿಲ್ಲ. ಈಗ ಕ್ಯಾನ್ಸರ್ ಗೆ ಬಲಿಯಾಗಿದ್ದಾರೆ.

ಕೇರಳ ಮೂಲದ ಸಪ್ನಾ ಟ್ರೇಸ್ ಮೃತ ನರ್ಸ್. ಈಕೆ ಕ್ಯಾಥೋಲಿಕ್ ಸಿದ್ಧಾಂತಗಳನ್ನು ನಂಬಿದ್ಲು. 8ನೇ ಮಗುವಿಗೆ ಜನ್ಮ ಕೊಡಲೇಬೇಕೆಂದು ನಿರ್ಧರಿಸಿದ್ಲು. ಕ್ಯಾನ್ಸರ್ ನಿಂದ ಬಳಲುತ್ತಿರುವುದು ಗೊತ್ತಿದ್ರೂ, ಗರ್ಭಪಾತ ಮಾಡಿಸಿಕೊಂಡು ಚಿಕಿತ್ಸೆ ಪಡೆಯಲು ಮುಂದಾಗಿರಲಿಲ್ಲ.

ಮೂರು ತಿಂಗಳ ಗರ್ಭಿಣಿಯಾಗಿದ್ದಾಗ್ಲೇ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಗರ್ಭಪಾತ ಮಾಡಿಸಿಕೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ವೈದ್ಯರು ಸೂಚಿಸಿದ್ರು. ಇಲ್ಲವಾದಲ್ಲಿ ಮಗು ಅಂಗವೈಕಲ್ಯದಿಂದ ಬಳಲುವ ಸಾಧ್ಯತೆ ಇದೆ ಅಂತಾನೂ ಎಚ್ಚರಿಕೆ ನೀಡಿದ್ದರು.

ಆದ್ರೆ ಅದನ್ನೆಲ್ಲ ಸಪ್ನಾ ಕಡೆಗಣಿಸಿದ್ಲು. ಈಗ ಆಕೆಗೆ 8 ತಿಂಗಳು ತುಂಬಿತ್ತು. ಪತಿ ಕೂಡ ಪತ್ನಿಯ ನಿರ್ಧಾರವನ್ನು ಬೆಂಬಲಿಸಿದ್ದ. ಆಕೆ ಆರೋಗ್ಯವಾಗಿದ್ರೆ 9ನೇ ಮಗುವನ್ನು ಕೂಡ ಮಾಡಿಕೊಳ್ಳಲು ಸಿದ್ಧ ಎಂದಿದ್ದ. ಆದ್ರೆ ಈಗ ಸಪ್ನಾ ಮೃತಪಟ್ಟಿದ್ದು, ಉಳಿದ 7 ಮಕ್ಕಳು ತಾಯಿಯನ್ನು ಕಳೆದುಕೊಳ್ಳುವಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...