alex Certify
ಕನ್ನಡ ದುನಿಯಾ       Mobile App
       

Kannada Duniya

ಏಮ್ಸ್ ನೋಂದಣಿಗೂ ಆಧಾರ್ ಕಾರ್ಡ್ ಕಡ್ಡಾಯ

download-1

ಆಧಾರ್ ಕಾರ್ಡ್ ಈಗ ಎಲ್ಲ ಕಡೆ ಕಡ್ಡಾಯವಾಗ್ತಾ ಇದೆ. ಡಿಜಿಟಲ್ ಇಂಡಿಯಾ ನಿರ್ಮಾಣಕ್ಕೆ ಅಖಿಲ ಭಾರತ ಮೆಡಿಕಲ್ ಸೈನ್ಸ್ (ಏಮ್ಸ್) ಕೂಡ ಬೆಂಬಲ ನೀಡಿದೆ. ಆಸ್ಪತ್ರೆಯಲ್ಲಿ ಆಧಾರ್ ಕಾರ್ಡ್ ಕಡ್ಡಾಯ ಮಾಡಲು ಹೊರಟಿದೆ.

ಆಧಾರ್ ಕಾರ್ಡ್ ಇಲ್ಲದೆ ಅಪಾಯಿಂಟ್ ಮೆಂಟ್ ಸಿಗೋದು ಇನ್ಮುಂದೆ ಕಷ್ಟ. ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದಿರುವ ಏಮ್ಸ್ ಆಡಳಿತ ಮಂಡಳಿ ಚಿಕಿತ್ಸೆಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡುವಂತೆ ಕೋರಿದೆ. ಈ ಹಿಂದೆ ಇದು ಅನಿವಾರ್ಯವಾಗಿರಲಿಲ್ಲ. ನೋಂದಣಿಗೆ ಆಧಾರ್ ಕಾರ್ಡ್ ಅನಿವಾರ್ಯವಾದಲ್ಲಿ ಡಿಜಿಟಲ್ ಪ್ರಕ್ರಿಯೆ ಸುಲಭವಾಗಲಿದೆ. ರೋಗಿಗಳ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ. ಹಾಗಾಗಿ ನೋಂದಣಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡಬೇಕೆಂದು ಏಮ್ಸ್ ಆಡಳಿತ ಮಂಡಳಿ ಅಭಿಪ್ರಾಯಪಟ್ಟಿದೆ.

2015 ರಿಂದಲೇ ಆನ್ಲೈನ್ ನೋಂದಣಿ ಸೇವೆ ಶುರುವಾಗಿದ್ದು, ಈವರೆಗೆ 40 ಲಕ್ಷಕ್ಕೂ ಹೆಚ್ಚು ರೋಗಿಗಳು ಆನ್ಲೈನ್ ನೋಂದಣಿ ಮಾಡಿಸಿದ್ದಾರೆ. ಸರ್ಕಾರಿ ಸೇವೆಗಳಿಗೆ ಕೂಡ ಆಧಾರ್ ಕಡ್ಡಾಯವಾಗ್ತಿರುವುದರಿಂದ ರೋಗಿಗಳಿಗೆ ಇದರಿಂದ ನೆರವಾಗಲಿದೆ ಎಂದು ಆಡಳಿತ ಮಂಡಳಿ ಅಭಿಪ್ರಾಯಪಟ್ಟಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...