alex Certify
ಕನ್ನಡ ದುನಿಯಾ       Mobile App
       

Kannada Duniya

ಎಐಎಡಿಎಂಕೆ ಶಾಸಕ ಬೋಸ್ ನಿಧನ

ತಮಿಳುನಾಡಿನ ಆಡಳಿತಾರೂಢ ಪಕ್ಷದ ಶಾಸಕ ಎ.ಕೆ. ಬೋಸ್ ಅನಾರೋಗ್ಯದಿಂದಾಗಿ ಬುಧವಾರ ತಡರಾತ್ರಿ ಮಧುರೈನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ತಿರುಪ್ಪರನಕುಂದ್ರಮ್ ಶಾಸಕರಾಗಿದ್ದ ಎ.ಕೆ. ಬೋಸ್ ನಿಧನದಿಂದಾಗಿ ತಿರುಪ್ಪನಕುಂದ್ರಮ್ ಕ್ಷೇತ್ರವೀಗ ನೆಚ್ಚಿನ ಶಾಸಕನನ್ನು ಕಳೆದುಕೊಂಡ ಅನಾಥ ಭಾವವನ್ನು ಅನುಭವಿಸುತ್ತಿದೆ.

ಕೆಲ ವರ್ಷಗಳ ಹಿಂದಿನಿಂದಲೂ ಎ.ಕೆ. ಬೋಸ್ ಅನಾರೋಗ್ಯದಿಂದ ಬಳಲುತ್ತಿದ್ದರು. ಕೆಲ ದಿನಗಳ ಹಿಂದೆ ಅವರನ್ನು ಮಧುರೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದ ಹಿನ್ನಲೆಯಲ್ಲಿ ಗುರುವಾರ ನಸುಕಿನಲ್ಲಿ ಬೋಸ್ ವಿಧಿವಶರಾಗಿದ್ದಾರೆ. ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರಿದ್ದ ಬೋಸ್ ಕುಟುಂಬ ಈಗ ಯಜಮಾನನ ನಿಧನಕ್ಕೆ ಕೊರಗುತ್ತಿದೆ.

ಎಐಎಡಿಎಂಕೆ ಪಕ್ಷದ ಯುವ ಘಟಕದ ನಾಯಕನಾಗಿ ರಾಜಕೀಯ ಜೀವನ ಆರಂಭಿಸಿದ ಬೋಸ್, ಮಧುರೈ ಜಿಲ್ಲಾ ಘಟಕದ ಅಧ್ಯಕ್ಷರು ಆಗಿದ್ದರು. 2006ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ತಮಿಳುನಾಡಿನ ವಿಧಾನಸಭೆ ಪ್ರವೇಶಿಸಿದ ಬೋಸ್ ಒಟ್ಟು ಮೂರು ಬಾರಿ ಶಾಸಕರಾಗಿ ಅನೇಕ ಜನಾಭಿವೃದ್ಧಿ ಕಾರ್ಯಗಳನ್ನ ಮಾಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...