alex Certify
ಕನ್ನಡ ದುನಿಯಾ       Mobile App
       

Kannada Duniya

ಪನ್ನೀರ್ ಗೆ ಸಿಕ್ತು ‘ಕರೆಂಟ್ ಕಂಬ’, ಶಶಿಕಲಾಗೆ ‘ಟೋಪಿ’

ops-sasiskala

ಇಬ್ಭಾಗವಾಗಿರುವ ತಮಿಳುನಾಡಿನ ಎಐಎಡಿಎಂಕೆ ಪಕ್ಷದ ಎರಡು ಬಣಗಳಿಗೆ ಆರ್.ಕೆ.ನಗರ ಕ್ಷೇತ್ರದ ಉಪಚುನಾವಣೆಗಾಗಿ ಪ್ರತ್ಯೇಕ ಚಿಹ್ನೆಗಳು ಸಿಕ್ಕಿವೆ. ಓ ಪನ್ನೀರ್ ಸೆಲ್ವಂ ಬಣಕ್ಕೆ ಚುನಾವಣಾ ಆಯೋಗ ಕರೆಂಟ್ ಕಂಬದ ಚಿಹ್ನೆ ನೀಡಿದ್ದು, ಶಶಿಕಲಾ ಬಣಕ್ಕೆ ಟೋಪಿ ಚಿಹ್ನೆ ದೊರೆತಿದೆ.

ಪಕ್ಷದ ಹೊಸ ಹೆಸರಿನಲ್ಲಿ ಎರಡೂ ಬಣಗಳು ‘ಅಮ್ಮ’ನ ಹೆಸರನ್ನು ಬಳಸಿಕೊಳ್ಳಲು ಆಯೋಗ ಅನುಮತಿ ನೀಡಿದೆ. ಓ ಪನ್ನೀರ್ ಸೆಲ್ವಂ ಅವರ ಹೊಸ ಪಕ್ಷಕ್ಕೆ ‘ಎಐಎಡಿಎಂಕೆ ಪುರುಚ್ಚಿ ತಲೈವಿ ಅಮ್ಮ’ ಎಂದು ಹೆಸರಿಡಲಾಗುತ್ತಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಟೋಪಿ ಚಿಹ್ನೆ ಪಡೆದಿರುವ ಶಶಿಕಲಾ ಬಣ ತಮ್ಮ ಪಕ್ಷಕ್ಕೆ ‘ಎಐಎಡಿಎಂಕೆ ಅಮ್ಮ’ ಎಂದು ಹೆಸರಿಡಲಿದೆ. ಕ್ರಿಕೆಟ್ ಬ್ಯಾಟ್, ಟೋಪಿ ಅಥವಾ ಆಟೋ ರಿಕ್ಷಾ ಈ ಮೂರರ ಪೈಕಿ ಯಾವುದಾದರೂ ಒಂದು ಚಿಹ್ನೆ ನೀಡುವಂತೆ ಶಶಿಕಲಾ ಬಣ ಮನವಿ ಮಾಡಿತ್ತು.

ಪನ್ನೀರ್ ಸೆಲ್ವಂ ಬಣದಿಂದ ಇ.ಮಧುಸೂದನನ್ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಶಶಿಕಲಾ ಬೆಂಬಲಿಗ ವಿ.ದಿನಕರನ್ ಕೂಡ ಚುನಾವಣಾ ಕಣದಲ್ಲಿದ್ದಾರೆ. ಚುನಾವಣೆಯಲ್ಲಿ ಗೆಲುವು ಸಾಧಿಸಿ ಎಐಎಡಿಎಂಕೆ ಪಕ್ಷದ ಹೆಸರು ಮತ್ತು ಚಿಹ್ನೆ ಎರಡನ್ನೂ ಮರಳಿ ಪಡೆಯುವುದಾಗಿ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...