alex Certify
ಕನ್ನಡ ದುನಿಯಾ       Mobile App
       

Kannada Duniya

ಜಯಾ ಸಾವಿನ ಕುರಿತ ಶ್ವೇತ ಪತ್ರ ಬೇಡಿಕೆಯನ್ನು ತಳ್ಳಿ ಹಾಕಿದ ಎಐಎಡಿಎಂಕೆ

jaya-sasi-1ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾರವರ ಸಾವಿನ ಕುರಿತಂತೆ ಶ್ವೇತ ಪತ್ರ ಹೊರಡಿಸಬೇಕೆಂಬ ಬೇಡಿಕೆಯಿಟ್ಟಿದ್ದ ವಿಪಕ್ಷಗಳ ಮನವಿಯನ್ನು ತಳ್ಳಿ ಹಾಕಿರುವ ಎಐಎಡಿಎಂಕೆ ಇದು ರಾಜಕೀಯ ಪ್ರೇರಿತವಾಗಿದೆ ಎಂದು ಹೇಳಿದೆ.

ಜಯಲಲಿತಾ ಸಾವನ್ನಪ್ಪಿದ ಬಳಿಕ 13 ನೇ ದಿನದ ಕಾರ್ಯಗಳನ್ನು ನೆರವೇರಿಸಿದ ನಂತರ ಜಯಾ ನಿವಾಸ ಪೋಯಸ್ ಗಾರ್ಡನ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಎಐಎಡಿಎಂಕೆ ವಕ್ತಾರ ಸಿ. ಪೊನ್ನಯೈನ್, ಜಯಲಲಿತಾರವರು ಅನಾರೋಗ್ಯಕ್ಕೀಡಾದಾಗ ಚೆನ್ನೈ ಅಪೊಲೋ ಆಸ್ಪತ್ರೆ ವೈದ್ಯರು, ನವದೆಹಲಿಯ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯರ ಜೊತೆಗೆ ಲಂಡನ್ ನ ಡಾ. ರಿಚರ್ಡ್ ಬೇಯ್ಲಿ ಚಿಕಿತ್ಸೆ ನೀಡಿದ್ದಾರೆ. ಜೊತೆಗೆ ಸಿಂಗಾಪೂರದ ಮೌಂಟ್ ಎಲೆಜೆಬೆತ್ ಆಸ್ಪತ್ರೆ ವೈದ್ಯರ ಸಲಹೆಯನ್ನೂ ಕೇಳಲಾಗಿದೆ. ಹೀಗಿದ್ದಾಗ್ಯೂ ಪ್ರತಿ ಪಕ್ಷಗಳು ಶ್ವೇತ ಪತ್ರ ಹೊರಡಿಸಬೇಕೆಂದು ಆಗ್ರಹಿಸುತ್ತಿರುವುದು ರಾಜಕೀಯ ಪ್ರೇರಿತ ಎಂದಿದ್ದಾರೆ.

1991 ರಲ್ಲಿ ಜಯಲಲಿತಾರವರು ಮಾಡಿದ್ದ ದಾಖಲೆಗಳನ್ನು ಪ್ರದರ್ಶಿಸಿದ ಸಿ. ಪೊನ್ನಯೈನ್, ಅಂದೇ ಜಯಲಲಿತಾರವರು ತಮ್ಮ ಉತ್ತರಾಧಿಕಾರಿಯನ್ನಾಗಿ ಶಶಿಕಲಾರನ್ನು ನೇಮಕ ಮಾಡಿದ್ದಾರೆ. ಶಶಿಕಲಾ ಎಐಎಡಿಎಂಕೆ ನೇತೃತ್ವ ವಹಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಪ್ರತಿಪಕ್ಷಗಳು ಇದನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಸಲುವಾಗಿ ಶ್ವೇತಪತ್ರದ ಬೇಡಿಕೆಯನ್ನಿಟ್ಟಿವೆ ಎಂದಿದ್ದಾರೆ. ಎಂ.ಜಿ. ರಾಮಚಂದ್ರನ್ ನಿಧನರಾದ ಸಂದರ್ಭದಲ್ಲಿ ಪಕ್ಷದ ನೇತೃತ್ವವನ್ನು ‘ಅಮ್ಮಾ’ ವಹಿಸಿಕೊಂಡಿದ್ದಂತೆ ‘ಅಮ್ಮಾ’ನಿಲ್ಲದ ಈ ಸಂದರ್ಭದಲ್ಲಿ ಅವರ ಅಭಿಲಾಷೆಯಂತೆ ‘ಚಿನ್ನಮ್ಮ’ ಪಕ್ಷದ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಇದಕ್ಕೆ ಪಕ್ಷದೊಳಗೆ ಯಾರ ವಿರೋಧವೂ ಇಲ್ಲ ಎಂದು ಸಿ. ಪೊನ್ನಯೈನ್ ಸ್ಪಷ್ಟಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...