alex Certify
ಕನ್ನಡ ದುನಿಯಾ       Mobile App
       

Kannada Duniya

ಶಶಿಕಲಾಗೆ ಆದ್ಯತೆ, ಕಾರ್ಯಕರ್ತರ ಆಕ್ರೋಶ

poste

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ನಿಧನದ ಬಳಿಕ, ಪಕ್ಷದಲ್ಲಿ ಮತ್ತು ಆಡಳಿತದಲ್ಲಿ ಶಶಿಕಲಾ ಹಿಡಿತ ಸಾಧಿಸಿದ್ದಾರೆ.

ಎ.ಐ.ಎ.ಡಿ.ಎಂ.ಕೆ. ಪಕ್ಷದಲ್ಲಿ ಶಶಿಕಲಾ ಅವರಿಗೆ ಆದ್ಯತೆ ನೀಡುತ್ತಿರುವುದಕ್ಕೆ ಕಾರ್ಯಕರ್ತರಿಂದಲೇ ಆಕ್ರೋಶ ವ್ಯಕ್ತವಾಗುತ್ತಿದೆ. ಎ.ಐ.ಎ.ಡಿ.ಎಂ.ಕೆ. ಪಕ್ಷದ ಪ್ರಧಾನ ಕಾರ್ಯದರ್ಶಿಯಾಗುವ ಜೊತೆಗೆ ಮುಖ್ಯಮಂತ್ರಿ ಹುದ್ದೆಗೇರಲು ಶಶಿಕಲಾ ತಯಾರಿ ನಡೆಸಿದ್ದಾರೆ.

ಆದರೆ, ಪಕ್ಷದ ಕಾರ್ಯಕರ್ತರಲ್ಲಿ ಇದು ಅಸಮಾಧಾನಕ್ಕೆ ಕಾರಣವಾಗಿದೆ. ಚೆನ್ನೈನ ಆರ್.ಕೆ. ನಗರ ಮತ್ತು ಧರ್ಮಪುರಿ ಜಿಲ್ಲೆಯಲ್ಲಿ ಜಯಲಲಿತಾ ಹಾಗೂ ಶಶಿಕಲಾ ಭಾವಚಿತ್ರಗಳೊಂದಿಗೆ ಹಾಕಲಾಗಿದ್ದ ಫ್ಲೆಕ್ಸ್ ಗಳನ್ನು ಹರಿದು ಹಾಕಲಾಗಿದೆ.

ಶಶಿಕಲಾ ಅವರ ಫೋಟೋಗಳಿದ್ದ ಭಾಗವನ್ನು ಮಾತ್ರ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಜಯಾ ಅವರ ಸ್ಥಾನಕ್ಕೆ ಶಶಿಕಲಾ ಅವರು ಬೇಡ ಎಂದು ಕೆಲವೆಡೆ ಕಾರ್ಯಕರ್ತರು ಒತ್ತಾಯಿಸಿದ್ದಾರೆನ್ನಲಾಗಿದ್ದು, ನಾಯಕರು ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆಯುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...