alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಸಕರನ್ನು ಕೂಡಿಟ್ಟ ಪ್ರಕರಣದ ತನಿಖೆ ನಡೆಸುವಂತೆ ಕೋರ್ಟ್ ಸೂಚನೆ

madras-hc-seeks-report-from-policeತಮಿಳುನಾಡಿನ ರಾಜಕೀಯ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದುವರೆಗೂ ತಮ್ಮ ಬೆಂಬಲಕ್ಕೆ 134 ಶಾಸಕರಿದ್ದಾರೆಂದು ಹೇಳಿಕೊಳ್ಳುತ್ತಿದ್ದ ಶಶಿಕಲಾ ಬೆಂಬಲಿಗರು ಈ ಶಾಸಕರುಗಳನ್ನು ಅಕ್ರಮವಾಗಿ ಕೂಡಿಟ್ಟಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಎಐಎಡಿಎಂಕೆ ಶಾಸಕಿ ಗೀತಾ ಅವರ ಪತಿ ಮದ್ರಾಸ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದು, ಅರ್ಜಿ ವಿಚಾರಣೆ ವೇಳೆ ಶಾಸಕರನ್ನು ಗೃಹ ಬಂಧನದಲ್ಲಿಟ್ಟಿರುವ ಮಾಧ್ಯಮಗಳ ವರದಿ ಕುರಿತಂತೆ ತನಿಖೆ ನಡೆಸಲು ಚೆನ್ನೈ ಪೊಲೀಸರಿಗೆ ನ್ಯಾಯಾಲಯ ಸೂಚನೆ ನೀಡಿದೆ.

ಈ ಮಧ್ಯೆ ಗೋಲ್ಡನ್ ಬೇ ರೆಸಾರ್ಟ್ ನಲ್ಲಿದ್ದ ಶಾಸಕರನ್ನು ಮತ್ತೊಂದೆಡೆ ಕರೆದೊಯ್ಯುವ ಪ್ರಯತ್ನ ನಡೆಯುತ್ತಿದ್ದು, ಶಾಸಕರುಗಳಿಗೆ ಪತ್ರಿಕೆ, ಟಿವಿ ಸಿಗದಂತೆ ಎಚ್ಚರ ವಹಿಸಲಾಗಿದೆ ಎನ್ನಲಾಗಿದೆ. ಮೊಬೈಲ್ ಗಳನ್ನೂ ಸ್ವಿಚ್ಚಾಫ್ ಮಾಡಿಸಲಾಗಿದ್ದು, ಅವರುಗಳಿಗೆ ಪ್ರಸಕ್ತ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಯಾವುದೇ ಮಾಹಿತಿಯಿಲ್ಲವೆನ್ನಲಾಗಿದೆ.

ಶಾಸಕಿ ಗೀತಾರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಸ್ವಇಚ್ಚೆಯಿಂದ ತಾವು ಹೋಗಿರುವುದಾಗಿ ಹೇಳಿಕೆ ಕೊಡಿಸುವ ಪ್ರಯತ್ನವೂ ನಡೆದಿದೆ. ಬೆದರಿಕೆ ಕರೆಗಳು ಬರುತ್ತಿರುವ ಕಾರಣಕ್ಕೆ ಶಾಸಕರುಗಳು ತಮ್ಮ ಮೊಬೈಲ್ ಗಳನ್ನು ಸ್ವಿಚ್ಚಾಫ್ ಮಾಡಿಕೊಂಡಿದ್ದಾರೆಂದು ಶಶಿಕಲಾ ಬೆಂಬಲಿಗರು ಹೇಳಿಕೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...