alex Certify
ಕನ್ನಡ ದುನಿಯಾ       Mobile App
       

Kannada Duniya

ಸರಗಳ್ಳರನ್ನು ಹಿಡಿದವರಿಗೆ ನಗದು ಬಹುಮಾನ ಘೋಷಿಸಿದ ಎಂಎಲ್ಎ

ಕರ್ನಾಟಕದ ಹಾಗೆ ತಮಿಳುನಾಡಿನಲ್ಲೂ ಸರಗಳ್ಳರ ಹಾವಳಿ ಮಿತಿಮೀರಿಬಿಟ್ಟಿದೆ. ಸರಗಳ್ಳರಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆಯ ಶಾಸಕ ಆರ್. ಕನಕರಾಜ್ ಪ್ರಕಟಣೆಯೊಂದನ್ನ ಹೊರಡಿಸಿದ್ದಾರೆ. ಸರಗಳ್ಳನನ್ನ ಹಿಡಿದುಕೊಟ್ಟವರಿಗೆ 50 ಸಾವಿರ ರೂಪಾಯಿಯ ನಗದು ಬಹುಮಾನ ಘೋಷಿಸಿದ್ದಾರೆ.

ಇಷ್ಟೇ ಅಲ್ಲ ಸರಗಳ್ಳರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದವರಿಗೆ 5000 ರೂಪಾಯಿ ನಗದು ಬಹುಮಾನವನ್ನು ಘೋಷಿಸಿದ್ದಾರೆ. ಆರ್. ಕನಕರಾಜ್ ಆಡಳಿತಾರೂಢ ಎಐಎಡಿಎಂಕೆ ಪಕ್ಷದ ಶಾಸಕ. ಸದನದಲ್ಲಿ ಸರಗಳ್ಳರ ಹಾವಳಿ ಬಗ್ಗೆ ವಿಪಕ್ಷಗಳ ಆರೋಪದ ಹಿನ್ನಲೆಯಲ್ಲಿ ಈ ರೀತಿ ಪ್ರಕಟಣೆ ಮಾಡಿದ್ದಾಗಿ ಕನಕರಾಜ್ ತಿಳಿಸಿದ್ದಾರೆ.

ಆದ್ರೆ ಕನಕರಾಜ್ ಹೊರಡಿಸಿರುವಂತಾ ಪ್ರಕಟಣೆಯಿಂದ ಜನರು ಕಾನೂನನ್ನು ಕೈಗೆ ತೆಗೆದುಕೊಳ್ಳೋದಕ್ಕೆ ಪ್ರಚೋದಿಸುವಂತಿದೆ ಅಂತ ವಿಪಕ್ಷಗಳು ಆರೋಪಿಸಿವೆ. ಇದಕ್ಕೂ ಸ್ಪಷ್ಟೀಕರಣ ನೀಡಿರುವ ಕನಕರಾಜ್, ಕೇವಲ ಯುವಕರು ಸರಗಳ್ಳರನ್ನ ಹಿಡಿದು ಪೊಲೀಸರಿಗೆ ಒಪ್ಪಿಸಲಿ ಅನ್ನೋ ಉದ್ದೇಶವೇ ಹೊರತು ಅವರನ್ನು ತಪ್ಪುದಾರಿಗೆ ಎಳೆಯುವ ಉದ್ದೇಶವಲ್ಲ ಅಂತ ಹೇಳಿದ್ದಾರೆ.

ಹಗಲು ರಾತ್ರಿ ಎನ್ನದಂತೆ ಚೆನ್ನೈನಲ್ಲಿ ಹತ್ತಾರು ಸರಗಳ್ಳತನದ ಪ್ರಕರಣಗಳು ವರದಿಯಾಗ್ತಿವೆ. ಹಾಗಾಗಿ ಸರಗಳ್ಳರನ್ನ ಜನಸಾಮಾನ್ಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ರೆ ತುಂಬಾ ಸಹಾಯವಾಗಲಿದೆ ಅಂತಿದ್ದಾರೆ ಶಾಸಕರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...