alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾದಕ್ಕೆ ಕಾರಣವಾಗಿದೆ ಏರ್ ಇಂಡಿಯಾ ಮಾಡಿದ ದೊಡ್ಡ ಯಡವಟ್ಟು

ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆ ಮಾಡಿದ ದೊಡ್ಡ ಯಡವಟ್ಟೊಂದು ಈಗ ವಿವಾದಕ್ಕೆ ಕಾರಣವಾಗಿದೆ. ವಿಮಾನ ಸಿಬ್ಬಂದಿಯಾಗಿ ವಿದೇಶಕ್ಕೆ ತೆರಳಿದ್ದ ಉದ್ಯೋಗಿಯನ್ನು ಆತ ಅಲ್ಲಿದ್ದಾಗಲೇ ಕೆಲಸದಿಂದ ವಜಾಗೊಳಿಸಿದ್ದು, ವಾಪಸ್ ಬರಲಾಗದಂತೆ ಆತನನ್ನು ಅತಂತ್ರನನ್ನಾಗಿಸಿದ ಘಟನೆ ನಡೆದಿದೆ.

ಜುಲೈ 1 ರಂದು ದೆಹಲಿಯಿಂದ ರೋಮ್ ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಈತ ಸಿಬ್ಬಂದಿಯಾಗಿ ತೆರಳಿದ್ದ. ಜುಲೈ 2 ರಂದು ಈತನನ್ನು ಕೆಲಸದಿಂದ ವಜಾಗೊಳಿಸಿದ ವಿಮಾನಯಾನ ಸಂಸ್ಥೆ ಅಧಿಕಾರಿಗಳು, ಇ-ಮೇಲ್ ಸಂದೇಶ ರವಾನಿಸಿದ್ದಾರೆ.

ವಾಪಸ್ ಬರಲು ಆತ ಏರ್ ಇಂಡಿಯಾ ಸಿಬ್ಬಂದಿಯಾಗಿರಲಿಲ್ಲ. ಪ್ರವಾಸಿಯಾಗಿ ಮರಳಿ ಬರಬೇಕೆಂದರೆ ಆತನ ಬಳಿ ಟಿಕೆಟ್ ಇರಲಿ ವೀಸಾ ಕೂಡ ಇರಲಿಲ್ಲ. ಇದರಿಂದ ಕಂಗಾಲಾದ ವಜಾಗೊಂಡ ಉದ್ಯೋಗಿ, ತನ್ನ ಪರಿಸ್ಥಿತಿಯನ್ನು ವಿವರಿಸಿ ಇ-ಮೇಲ್ ಸಂದೇಶ ರವಾನಿಸಿದಾಗಲೇ ಏರ್ ಇಂಡಿಯಾ ಅಧಿಕಾರಿಗಳಿಗೆ ತಾವು ಮಾಡಿದ ಯಡವಟ್ಟಿನ ಅರಿವಾಗಿದೆ.

ಕೂಡಲೇ ಆತನನ್ನು ಕೆಲಸಕ್ಕೆ ತೆಗೆದುಕೊಂಡಿದ್ದು, ಏರ್ ಇಂಡಿಯಾ ಸಿಬ್ಬಂದಿಯಾಗಿ ಆತ ದೆಹಲಿಗೆ ಮರಳಿ ಬರುತ್ತಲೇ ಜುಲೈ 5 ರಂದು ಮತ್ತೆ ವಜಾ ಆದೇಶ ಹೊರಡಿಸಿದ್ದಾರೆ. ವಿಮಾನ ಸಿಬ್ಬಂದಿಗಳು ಒತ್ತಡ ರಹಿತವಾಗಿ ಕೆಲಸ ಮಾಡಬೇಕಾದ ವಾತಾವರಣ ಸೃಷ್ಟಿಸಬೇಕಾದ ಅಧಿಕಾರಿಗಳು, ಆತ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ರೋಮ್ ನಿಂದ ದೆಹಲಿಗೆ ಬರುವಂತೆ ಮಾಡಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಈಗ ಮೂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...