alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾದಕ್ಕೆ ಕಾರಣವಾದ ‘ಐ ಲವ್ ಮೋದಿ’ ಪೆನ್

i love modi pen‘ಟುಡೇಸ್’ ಪೆನ್ ತಯಾರಿಕಾ ಸಂಸ್ಥೆ 10 ಹಾಗೂ 12 ನೇ ತರಗತಿ ಪರೀಕ್ಷೆ ಬರೆಯುವ ಗುಜರಾತಿನ ಅಹ್ಮದಾಬಾದ್ ವಿದ್ಯಾರ್ಥಿಗಳಿಗೆ ‘ಐ ಲವ್ ಮೋದಿ’ ಹೆಸರಿನ ಪೆನ್ ಗಳನ್ನು ಉಡುಗೊರೆಯಾಗಿ ನೀಡಿದ್ದು, ಅದೀಗ ವಿವಾದಕ್ಕೆ ಕಾರಣವಾಗಿದೆ.

ಈ ಪೆನ್ ಮೇಲೆ ಮೋದಿಯವರ ಭಾವಚಿತ್ರ, ಜೊತೆಗೆ ಭಾರತೀಯ ಜನತಾ ಪಕ್ಷದ ಚುನಾವಣೆ ಚಿನ್ಹೆ ‘ಕಮಲ’ ವಿದ್ದು, ರಾಜಕೀಯ ಪಕ್ಷವೊಂದರ ಪ್ರಚಾರಕ್ಕೆ ವಿದ್ಯಾರ್ಥಿಗಳನ್ನು ಬಳಸಿಕೊಂಡಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಕೇಳಿ ಬಂದಿದೆ.

ಪೆನ್ ಗಳನ್ನು ವಿದ್ಯಾರ್ಥಿಗಳಿಗೆ ಉಡುಗೊರೆಯಾಗಿ ನೀಡಿರುವ ಸಂಸ್ಥೆ, ತಾವು ಇದಕ್ಕೆ ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆದಿರುವುದಾಗಿ ಹೇಳುತ್ತಿದ್ದರೆ, ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಇದನ್ನು ನಿರಾಕರಿಸಿರುವುದಲ್ಲದೇ ಕಳೆದ ವರ್ಷವೂ ಆ ಸಂಸ್ಥೆ ಅನುಮತಿ ಕೋರಿದ ವೇಳೆ ರಾಜಕೀಯ ಪಕ್ಷದ ಚಿನ್ಹೆ ಇದ್ದ ಕಾರಣ ಅನುಮತಿ ನೀಡಿರಲಿಲ್ಲವೆಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...