alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಲಾ ಮಕ್ಕಳಿಗೆ ತಿಂಗಳಿಗೊಮ್ಮೆ ಉಚಿತ ಹೇರ್​ ಕಟ್​​…!

ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸರ್ಕಾರಗಳು ಹಲವು ಜನಪರ ಯೋಜನೆ ಜಾರಿಗೆ ತರುತ್ತವೆ. ಇಂತಹ ಯೋಜನೆಗಳಿಂದ ಬಡ ವಿದ್ಯಾರ್ಥಿಗಳಿಗೆ ಉಪಯೋಗವಾಗಿದೆ. ಅಹಮದಾಬಾದ್​​ನಲ್ಲಿ ಮತ್ತೊಂದು ವಿಶೇಷ ಯೋಜನೆ ಜಾರಿಗೆ ತರಲಿದೆ.

ತಿಂಗಳಲ್ಲಿ ಒಮ್ಮೆ, ವಿದ್ಯಾರ್ಥಿಗಳಿಗೆ ಉಚಿತ್ ಹೇರ್ ಕಟ್ ಮಾಡಿಸಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಈ ಯೋಜನೆ ಜಾರಿಗೆ ಬಂದಲ್ಲಿ ಅಹಮದಾಬಾದ್​​ ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಸುಮಾರು 380 ಶಾಲೆಗಳ 1.25 ಲಕ್ಷ ವಿದ್ಯಾರ್ಥಿಗಳು ಇದರ ಲಾಭ ಪಡೆಯಲಿದ್ದಾರೆ.

ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಈ ಯೋಜನೆಯ ಉಪಯೋಗ ಪಡೆಯಲಿದ್ದಾರೆ. ಈ ಸಂಬಂಧ ಈಗಾಗಲೇ ಎನ್​​.ಜಿ.ಒ ಜೊತೆಗೆ ಮಾತುಕತೆ ಮುಗಿದಿದ್ದು, ಮುಂದಿನ ತಿಂಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ. ಉಚಿತವಾಗಿ ಹೇರ್​ ಕಟ್​ ಮಾಡುವ ಯೋಜನೆಗೆ ಪೋಷಕರೂ ಜೈ ಎಂದಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಆರ್ಥಿಕ ತೊಂದರೆಯಿಂದ ಬಳಲುತ್ತಾ ಇರುತ್ತಾರೆ. ತಿಂಗಳಿಗೆ ಒಮ್ಮೆ ಹೇರ್​ ಕಟ್​ ಮಾಡಿದ್ರೆ 70 ರೂಪಾಯಿ ಖರ್ಚು ಆಗುತ್ತದೆ. ಹೀಗಾಗಿ ಕೆಲವು ಪೋಷಕರು ಹಿಂದೇಟು ಹಾಕುತ್ತಾರೆ. ಪೋಷಕರಿಗೆ ಆಗುವ ಹೊರೆ ತಪ್ಪಿಸಲು ಈ ಪ್ಲಾನ್ ಮಾಡಿಕೊಳ್ಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...