alex Certify
ಕನ್ನಡ ದುನಿಯಾ       Mobile App
       

Kannada Duniya

ಸನ್ಯಾಸತ್ವ ತ್ಯಜಿಸಿ ಮನೆಗೆ ಬಂದ ಮಗ

ಲೀಲಾಭಾಯಿ ಹಾಗೂ ವಿಕಿಬೀನ್ ತುಂಬಾ ಖುಷಿಯಾಗಿದ್ದಾರೆ. ಸನ್ಯಾಸತ್ವ ಸ್ವೀಕರಿಸಿದ್ದ ಅವ್ರ ಮಗ ಧರ್ಮಪುತ್ರದಾಸ್ ಮನೆಗೆ ವಾಪಸ್ ಬಂದಿದ್ದಾನೆ. ದಂಪತಿ ಹಿರಿಯ ಮಗ, ಮೂರು ವರ್ಷಗಳ ಹಿಂದೆ ಸನ್ಯಾಸತ್ವ ಸ್ವೀಕರಿಸಿದ್ದ. ಇದು ಪಾಲಕರಿಗೆ ಇಷ್ಟವಿರಲಿಲ್ಲ. ನ್ಯಾಯಕ್ಕಾಗಿ ಪಾಲಕರು ಗುಜರಾತ್ ರಾಜ್ಯ ಸೇವೆಗಳ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು.

ಧರ್ಮಪುತ್ರದಾಸ್ ಶಿಕ್ಷಣಕ್ಕೆ ಪಾಲಕರು ಸುಮಾರು 20 ಲಕ್ಷ ಖರ್ಚು ಮಾಡಿದ್ದರು. ಆದ್ರೆ ವೃದ್ಧ ತಂದೆ-ತಾಯಿಯನ್ನು ಬಿಟ್ಟು ಧರ್ಮಪುತ್ರದಾಸ್ ಸನ್ಯಾಸತ್ವ ಸ್ವೀಕರಿಸಿದ್ದ. ಇದ್ರಿಂದ ದಂಪತಿ ಬದುಕು ದುಸ್ಥರವಾಗಿತ್ತು. ಮಗ ತಿಂಗಳ ಭತ್ಯೆ ನೀಡಬೇಕು. ಇಲ್ಲವೆ 20 ಲಕ್ಷ ಪರಿಹಾರ ನೀಡಬೇಕೆಂದು ಪಾಲಕರು ಮನವಿ ಮಾಡಿದ್ದರು.

ಒಂದು ಬಾರಿ ಮಗನ ಜೊತೆ ಮಾತುಕತೆ ನಡೆದಿತ್ತು. ಎರಡನೇ ಬಾರಿ ಮಾತುಕತೆಗೂ ಮುನ್ನವೇ ಧರ್ಮಪುತ್ರದಾಸ್ ಮನಸ್ಸು ಬದಲಿಸಿದ್ದಾನೆ. ಪಾಲಕರ ಬಳಿ ವಾಪಸ್ ಆಗಿದ್ದಾನೆ. ಸನ್ಯಾಸತ್ವ ಸ್ವೀಕರಿಸಲು ನನ್ನದೇ ಕಾರಣವಿತ್ತು. ಈಗ ಅಲ್ಲಿಂದ ವಾಪಸ್ ಆಗಿದ್ದೇನೆ. ಆದ್ರೆ ಧಾರ್ಮಿಕ ಕಾರ್ಯಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ತೆನೆ. ಅದಕ್ಕೆ ಪಾಲಕರು ಅಡ್ಡಿಯಾಗಬಾರದು ಎಂದಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...