alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ರಾಪ್ತರಿಗೆ ವಾಹನ ಚಲಾಯಿಸಲು ಕೊಟ್ಟ ಪೋಷಕರಿಗೆ ಸಂಕಷ್ಟ

ಅಹ್ಮದಾಬಾದ್: ಅಪಘಾತ ನಿಯಂತ್ರಿಸುವ ಉದ್ದೇಶದಿಂದ ಅಹ್ಮದಾಬಾದ್ ಸಂಚಾರಿ ಪೊಲೀಸರು ವಿಶೇಷ ಪ್ರಯೋಗ ನಡೆಸಿ ಸೈ ಎನಿಸಿಕೊಂಡಿದ್ದಾರೆ.

ಶಾಲೆಗೆ ಹೋಗುವ ಮಕ್ಕಳನ್ನು ಗುರಿಯಾಗಿಸಿಕೊಂಡು ಒಂದು ದಿನವಿಡೀ 15 ಶಾಲೆಗಳ ಸಮೀಪ ಡ್ರೈವಿಂಗ್ ಲೈಸೆನ್ಸ್ ತಪಾಸಣೆಗೆ ನಿಂತರು. ಈ ವೇಳೆ ಬರೋಬ್ಬರಿ 223 ಶಾಲಾ ಮಕ್ಕಳು ವಾಹನಾ ಚಾಲನಾ ಪರವಾನಗಿ ಇಲ್ಲದೇ ವಾಹನ ಓಡಿಸಿ ಸಿಕ್ಕಿಬಿದ್ದರು.

ಈ ಅಭಿಯಾನಕ್ಕೆ ಇಷ್ಟಕ್ಕೆ ನಿಲ್ಲಲಿಲ್ಲ. ವಾಹನವನ್ನು ವಶಕ್ಕೆ ಪಡೆದು ಸಿಕ್ಕಿಬಿದ್ದ ಮಕ್ಕಳ ಪೋಷಕರನ್ನು ಕರೆಸಿ ಅವರ ವಿರುದ್ಧ ದೂರು ದಾಖಲಿಸಿಕೊಳ್ಳಲಾಯಿತು. ಲೈಸೆನ್ಸ್ ಇಲ್ಲದೇ ಇದ್ದರೂ ವಾಹನ ಚಾಲನೆಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಯಿತು. ಅವರೆಲ್ಲರೂ ಈಗ ದಂಡ ಕಟ್ಟಲು ಹಾಗೂ ವಾಹನ ಬಿಡಿಸಿಕೊಳ್ಳಲು ನ್ಯಾಯಾಲಯಕ್ಕೆ ಹೋಗಬೇಕಾಗುತ್ತದೆ.

108 ತುರ್ತು ಹೆಲ್ಪ್ ಲೈನ್, ಜೆಪಿ ರಿಸರ್ಚ್, ಹಾಗೂ ಇಲಾಖೆಯ ಅಂಕಿಅಂಶ ಗಮನಿಸಿದಾಗ ಶಾಲೆಗಳ ಸಮೀಪವೇ ಹೆಚ್ಚು ಅಪಘಾತ ಸ್ಥಳಗಳಿರುವುದು ಗಮನಕ್ಕೆ ಬಂದಿತ್ತು. ಈ ಕಾರಣಕ್ಕೆ ಡಿಸಿಪಿಗಳ ನೇತೃತ್ವದಲ್ಲಿ 15 ಶಾಲೆಗಳ ಸಮೀಪವೇ ಪೊಲೀಸರು ಒಂದು ದಿನ ಕಾರ್ಯಾಚರಣೆ ನಡೆಸಿದರು. ಈ ಅಭಿಯಾನದಲ್ಲಿ ಪರವಾನಗಿ ಇಲ್ಲದೇ ವಾಹನ ಓಡಿಸಿ 223 ಮಕ್ಕಳು ಸಿಕ್ಕಿಬಿದ್ದಿರುವುದರಿಂದ ಈ ಕಾರ್ಯಾಚರಣೆಯನ್ನು ಇನ್ನಷ್ಟು ಕಾಲ ಮುಂದುವರೆಸುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...