alex Certify
ಕನ್ನಡ ದುನಿಯಾ       Mobile App
       

Kannada Duniya

ಕಡೆ ಕ್ಷಣದಲ್ಲಿ ರದ್ದಾಯ್ತು ಅಮಿತ್ ಶಾ ರೋಡ್ ಶೋ! ಕಾರಣವೇನು ಗೊತ್ತಾ?

ವಿಧಾನಸಭೆ ಚುನಾವಣೆ ನಡೆಯುತ್ತಿರುವ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ ನಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನಡೆಸಬೇಕಿದ್ದ ರ್ಯಾಲಿ ಹಾಗೂ ರೋಡ್ ಶೋ ನಡೆಸಬೇಕಿತ್ತು. ಆದರೆ ಭದ್ರತಾ ಕಾರಣದಿಂದಾಗಿ ಈ ಯೋಜನೆ ರದ್ದಾಗಿದೆ.

ಸೋಮವಾರ ಸಂಜೆ 5 ಗಂಟೆಗೆ ಭೋಪಾಲ್‌ನ ಉತ್ತರ ಅಸೆಂಬ್ಲಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಫಾತಿಮಾ ರಸೂಲ್ ಸಿದ್ದಿಕಿ ಪರವಾಗಿ ಅಮಿತ್ ಶಾ ಅವರ ರೋಡ್ ಶೋ ಆಯೋಜಿಸಲಾಗಿತ್ತು.

ಮಾತಾ ಮಂದಿರ ಭವಾನಿ ಚೌಕ್‌ ನಿಂದ ಹೊರಟು ಭಾರತ್ ಟಾಕೀಸ್ ಚೌರಾಹಾದಲ್ಲಿ ರೋಡ್ ಶೋ ಮುಕ್ತಾಯಗೊಳ್ಳಬೇಕಿತ್ತು. ಆದರೆ ಗುಪ್ತಚರ ದಳ ಈ ಕಾರ್ಯಕ್ರಮ ನಡೆಸದಂತೆ ಸೂಚಿಸಿತು ಎಂದು ಮಾಧ್ಯಮಗಳು ವರದಿ ಮಾಡಿವೆ.

ಭಾನುವಾರ ಅಮಿತ್ ಶಾ ಅವರು ಮಧ್ಯಪ್ರದೇಶದ ಸಾತ್ನಾ, ರೇವಾ, ಸಿಧಿ, ಹಾಗೂ ಉಮಾರಿಯಾ ಹೀಗೆ ನಾಲ್ಕು ನಗರಗಳಲ್ಲಿ ರ್ಯಾಲಿಗಳು ಹಾಗೂ ರೋಡ್ ಶೋ ನಡೆಸಿದ್ದರು. 230 ಸದಸ್ಯ ಬಲದ ಮಧ್ಯಪ್ರದೇಶದಲ್ಲಿ ನ.28ರಂದು ಮತದಾನ ನಡೆಯಲಿದ್ದು, ಡಿ.11 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...