alex Certify
ಕನ್ನಡ ದುನಿಯಾ       Mobile App
       

Kannada Duniya

ವಿದ್ಯಾರ್ಥಿಯ ಅಂಕಪಟ್ಟಿಯಲ್ಲಿ ಸಲ್ಮಾನ್ ಖಾನ್ ಫೋಟೋ

ಆಗ್ರಾ ವಿಶ್ವವಿದ್ಯಾನಿಲಯ, ಬಿಎ ಮೊದಲ ವರ್ಷದ ವಿದ್ಯಾರ್ಥಿಗೆ ನೀಡಿರುವ ಅಂಕಪಟ್ಟಿಯಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಫೋಟೋ ಹಾಕಲಾಗಿದೆ. ವಿದ್ಯಾರ್ಥಿಯ ಫೋಟೋ ಬದಲು ಸಲ್ಲು ಫೋಟೋ ಹಾಕಿ ಅಂಕಪಟ್ಟಿ ನೀಡಿರುವ ವಿವಿ ತಪ್ಪೆಲ್ಲಾ ಮಾರ್ಕ್ಸ್ ಶೀಟ್ ತಯಾರಿಸಿರುವ ಖಾಸಗಿ ಏಜೆನ್ಸಿಯದ್ದು ಎನ್ನುತ್ತಿದೆ.

ಅಲಿಗಢದ ಅಮೃತಾ ಸಿಂಗ್ ಮೆಮೋರಿಯಲ್ ಡಿಗ್ರಿ ಕಾಲೇಜಿನ ಆ ವಿದ್ಯಾರ್ಥಿ ಕೇವಲ ಶೇ.35ರಷ್ಟು ಅಂಕ ಪಡೆದು ಉತ್ತೀರ್ಣನಾಗಿದ್ದಾನೆ. ಅಂಕಪಟ್ಟಿಯಲ್ಲಿ ವಿದ್ಯಾರ್ಥಿಯ ಹೆಸರು ಸರಿಯಾಗಿದೆ, ಆದ್ರೆ ಫೋಟೋ ಮಾತ್ರ ಬದಲಾಗಿದೆ. ಇಂಥ ಪ್ರಮಾದ ಇದೇ ಮೊದಲೇನಲ್ಲ.

ಈ ಹಿಂದೆ ಕೂಡ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಅಂಬೇಡ್ಕರ್ ಫೋಟೋವನ್ನು ಕೂಡ ಮುದ್ರಿಸಲಾಗಿತ್ತು. ಪ್ರವೇಶ ಪತ್ರದಲ್ಲಿ ವಿದ್ಯಾರ್ಥಿಯ ಫೋಟೋ ಬದಲು ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್ ಫೋಟೋವನ್ನು ಹಾಕಲಾಗಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...