alex Certify
ಕನ್ನಡ ದುನಿಯಾ       Mobile App
       

Kannada Duniya

ತಮ್ಮನಿಗೆ ಮರೆಯಲಾಗದ ಉಡುಗೊರೆ ನೀಡಿದ ಅಕ್ಕ

rakshabandhan

ರಕ್ಷಾ ಬಂಧನದ ದಿನ ಸಹೋದರಿಯೊಬ್ಬಳು ಸಹೋದರನಿಗೆ ಮರೆಯಲಾಗದ ಉಡುಗೊರೆ ನೀಡಿದ್ದಾಳೆ. ಉತ್ತರ ಪ್ರದೇಶದ ಆಗ್ರಾದಲ್ಲಿ ಸಹೋದರಿಯೊಬ್ಬಳು ತನ್ನ ಸಹೋದರನಿಗೆ ಕಿಡ್ನಿ ದಾನ ಮಾಡಿದ್ದಾಳೆ. ವಂದನಾ ಚಂದ್ರ ಹೆಸರಿನ ಮಹಿಳೆಯೊಬ್ಬಳು ತನ್ನ ಸಣ್ಣ ತಮ್ಮನಿಗೆ ಕಿಡ್ನಿ ದಾನ ಮಾಡಿದ್ದಾಳೆ.

ಆಗ್ರಾದ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರಾಗಿ ಕೆಲಸ ಮಾಡುವ ವಿವೇಕ್ ಗೆ ಅನಾರೋಗ್ಯದ ಕಾರಣ ಒಂದು ಕಿಡ್ನಿ ಕೆಲಸ ನಿಲ್ಲಿಸಿತ್ತು. ಏಮ್ಸ್, ವೇದಾಂತ್, ಅಪೋಲೋ ಸೇರಿದಂತೆ ಅನೇಕ ಆಸ್ಪತ್ರೆಗೆ ಸಂಪರ್ಕಿಸಿದ್ದಾರೆ. ಆದ್ರೆ ಎಲ್ಲೂ ಕಿಡ್ನಿ ದಾನಿಗಳು ಸಿಗಲಿಲ್ಲ. ವಿವೇಕ್ ಆರೋಗ್ಯ ದಿನದಿನಕ್ಕೂ ಹದಗೆಡುತ್ತಿತ್ತು. ಹಾಗಾಗಿ ಸಹೋದರಿ ವಂದನಾ ಮುಂದೆ ಬಂದು ಕಿಡ್ನಿ ದಾನ ಮಾಡಿದ್ದಾರಂತೆ.

ವಂದನಾಗೆ ಮದುವೆಯಾಗಿದ್ದು 12 ವರ್ಷದ ಮಗಳಿದ್ದಾಳೆ. ನನಗೆ ತಮ್ಮನೆಂದ್ರೆ ಪ್ರೀತಿ. ನನ್ನ ಕಷ್ಟ ಕಾಲದಲ್ಲಿ ಆತ ನನ್ನ ಜೊತೆಗಿದ್ದ. ಆತನ ಜೀವನ ಉಳಿಸುವುದು ನನ್ನ ಕರ್ತವ್ಯವಾಗಿತ್ತು. ಈ ವರ್ಷ ರಾಖಿ ನನಗೆ ಬಹಳ ವಿಶೇಷ. ವಿವೇಕ್ ಆರೋಗ್ಯ ಸುಧಾರಿಸುತ್ತಿದ್ದು, ಇದು ಮತ್ತಷ್ಟು ಸಂತೋಷಕ್ಕೆ ಕಾರಣವಾಗಿದೆ ಎಂದು ವಂದನಾ ಹೇಳಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...