alex Certify
ಕನ್ನಡ ದುನಿಯಾ       Mobile App
       

Kannada Duniya

33 ವರ್ಷಗಳ ಬಳಿಕ ಪೊಲೀಸರ ಬಲೆಗೆ ಬಿದ್ದ ‘ಡಾನ್’

srivatsavaಕೊಲೆ ಪ್ರಕರಣವೊಂದರಲ್ಲಿ ಅಪರಾಧಿಯಾಗಿ ಜೈಲಿನಲ್ಲಿದ್ದ ಖೈದಿಯೊಬ್ಬ ಮೇಲ್ಮನವಿ ಸಲ್ಲಿಸಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದು, ಬಳಿಕ ನಾಪತ್ತೆಯಾಗಿದ್ದ ಆತ, ಬರೋಬ್ಬರಿ 33 ವರ್ಷಗಳ ಬಳಿಕ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಆಗ್ರಾದ ಡಾನ್ ಎಂದೇ ಕರೆಯಲಾಗುತ್ತಿದ್ದ ವಿಜಯ್ ನಂದನ್ ಶ್ರೀವಾತ್ಸವ್ ಅಲಿಯಾಸ್ ವಿಜಯ್ ಮೆಂಟಲ್ 1981 ರಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಬಂಧಿತನಾಗಿ ನ್ಯಾಯಾಲಯದಿಂದ ಜೈಲು ಶಿಕ್ಷೆಗೆ ಗುರಿಯಾಗಿದ್ದ. ಬಳಿಕ ಮೇಲ್ಮನವಿ ಸಲ್ಲಿಸಿದ ಆತ ಜಾಮೀನು ಪಡೆದುಕೊಂಡಿದ್ದು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ.

ಅಂದಿನಿಂದಲೂ ಆತನ ಬಂಧನಕ್ಕಾಗಿ ಆಗ್ರಾ ಪೊಲೀಸರು ಯತ್ನಿಸುತ್ತಿದ್ದು, ರಾಜಸ್ಥಾನದ ಅಜ್ಮೀರ್ ನಲ್ಲಿ ಆತ ಇರುವ ಮಾಹಿತಿ ಅರಿತು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಲೆಮರೆಸಿಕೊಂಡಿದ್ದ ವಿಜಯ್ ಮೆಂಟಲ್, ಈ ಅವಧಿಯಲ್ಲಿ ತನ್ನ ಪುತ್ರಿಯ ವಿವಾಹ ನೆರವೇರಿಸಿದ್ದನೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...