alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂದುವರಿಯುವುದೇ ಹೆಸರು ಬದಲಾವಣೆ ಪರ್ವ…?

ಉತ್ತರ ಪ್ರದೇಶ ಮುಖ್ಯಮಂತ್ರಿ ‌ಯೋಗಿ ಆದಿತ್ಯನಾಥ್ ಅವರು ರಾಜ್ಯದ ಎರಡು ಜಿಲ್ಲೆಗಳ‌ ಹೆಸರನ್ನು ಬದಲಿಸುತ್ತಿದ್ದಂತೆ, ಇದೀಗ ದೇಶದ ವಿವಿಧ ರಾಜ್ಯದ ನಗರಗಳ ಹೆಸರನ್ನು ಬದಲಿಸುವಂತೆ ಒತ್ತಾಯ ಹೆಚ್ಚಾಗಿದೆ.

ಪ್ರಮುಖವಾಗಿ ಬಿಜೆಪಿ‌ ಅಧಿಕಾರದಲ್ಲಿರುವ ಮಹಾರಾಷ್ಟ್ರದ ಎರಡು‌ ನಗರಗಳ ಹೆಸರನ್ನು ಬದಲಿಸುವಂತೆ, ಶಿವಸೇನೆ ಆಗ್ರಹಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿವಸೇನಾ‌ ವಕ್ತಾರ ಸಂಜಯ್ ರಾವತ್, ಉತ್ತರ ಪ್ರದೇಶ ಸರಕಾರ ಅಲಹಾಬಾದ್ ಹಾಗೂ ಫೈಜಾಬಾದ್ ನ್ನು ಪ್ರಜ್ಯಾರಾಜ್ ಹಾಗೂ ಅಯೋಧ್ಯಾ ಎಂದು ಬದಲಿಸಿದ್ದಾರೆ. ಅದೇ ರೀತಿ ಮಹಾರಾಷ್ಟ್ರದ ಔರಂಗಾಬಾದ್ ಹಾಗೂ ಒಸ್ಮಾಬಾದ್ ನ್ನು ಸಂಭಾಜಿ ನಗರ ಹಾಗೂ ಧರಾಶಿವ ನಗರ ಎಂದು ರಾಜ್ಯದ ಸಿಎಂ ದೇವೇಂದ್ರ ಫಡ್ನಾವಿಸ್ ಬದಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಎರಡು ನಗರಗಳ‌ ಹೆಸರನ್ನು ಬದಲಿಸಬೇಕೆಂದು ಶಿವಸೇನೆ ಕಳೆದರೆಡು ದಶಕದಿಂದ ಆಗ್ರಹಿಸಿದ್ದರು, ಯಾವುದೇ ಲಿಖಿತ ಮನವಿ ನೀಡಿರಲಿಲ್ಲ. ಕೇವಲ ಮಹಾರಾಷ್ಟ್ರ ಮಾತ್ರವಲ್ಲದೇ, ಗುಜರಾತ್ ನ ಅಹಮದಾಬಾದ್ ನ್ನು ಕರ್ಣವತಿ ಎಂದು, ಮಧ್ಯಪ್ರದೇಶದ ಭೂಪಾಲ್ ನ್ನು ಭೋಜ್ ಪಾಲ್ ಎಂದು ಬದಲಿಸಬೇಕೆಂಬ ಕೂಗು ಕೇಳಿಬಂದಿದೆ.

ಈ ಬಗ್ಗೆ ಗುರುವಾರ ಮಾತನಾಡಿರುವ ಗುಜರಾತ್ ಸಿಎಂ ವಿಜಯ್ ರೂಪಾನಿ, ಅಹಮದಾಬಾದ್ ನ್ನು ಕರ್ಣವತಿ‌ ಎಂದು ಬದಲಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕಾನೂನು ಹಾಗೂ ಇತರೆ ಆಯಾಮದ ಬಗ್ಗೆ ಪರಿಶೀಲನೆ ನಡೆಸಿದ ಬಳಿಕ ಈ ಬಗ್ಗೆ ದೃಡ ನಿರ್ಧಾರಕ್ಕೆ ಬರಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಈ ರೀತಿ ನಗರಗಳ ಹೆಸರನ್ನು ಬದಲಿಸುತ್ತಿರುವುದರಿಂದ ಪಂಚ ರಾಜ್ಯ ಚುನಾವಣೆಯಲ್ಲಿ ‌ಬಿಜೆಪಿಯ ಹಿಂದುತ್ವ ಅಜೆಂಡಾ ಕೆಲಸ ಮಾಡುತ್ತದೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...