alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳ ನೆಲೆಗಾಗಿ 3 ಕೋಟಿ ರೂ. ಆಸ್ತಿಯನ್ನು ಸರ್ಕಾರಕ್ಕೆ ನೀಡಿದ ದಂಪತಿ

ಕೇರಳದ ವೃದ್ಧ ದಂಪತಿ, ತಮ್ಮ ಕಾಲಾನಂತರ ಬುದ್ಧಿಮಾಂದ್ಯ ಮಗಳ ಯೋಗಕ್ಷೇಮವನ್ನು ಯಾರು ನೋಡಿಕೊಳ್ಳುತ್ತಾರೆಂಬ ಚಿಂತೆಗೆ ಬಿದ್ದಿದ್ದು, ಕಡೆಗೂ ಅದಕ್ಕೆ ಪರಿಹಾರ ಕಂಡುಕೊಂಡಿದ್ದಾರೆ. ತಮ್ಮ 3 ಕೋಟಿ ರೂ. ಮೌಲ್ಯದ ಮನೆಯನ್ನು ಸರ್ಕಾರದ ವಶಕ್ಕೆ ನೀಡಿದ್ದು, ಇಲ್ಲಿ ಬುದ್ಧಿಮಾಂದ್ಯ ಮಹಿಳೆಯರಿಗೆ ವಸತಿ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ತಮ್ಮ ಮಗಳಿಗೂ ಆಶ್ರಯ ನೀಡಿ ಎಂದು ಮನವಿ ಮಾಡಿದ್ದಾರೆ.

ಕೇರಳದ ಕೊಲ್ಲಂ ಜಿಲ್ಲೆಯವರಾದ 77 ವರ್ಷದ ಕಮಲಾಸನ್ ಹಾಗೂ 71 ವರ್ಷದ ಸರೋಜಿನಿ ದಂಪತಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿದ್ದಾರೆ. ಈ ದಂಪತಿಗಳಿಗೆ ಓರ್ವ ಮಗಳಿದ್ದು, ಬುದ್ಧಿಮಾಂದ್ಯತೆ ಹೊಂದಿರುವ ಕಾರಣ ತಮ್ಮ ಸಾವಿನ ನಂತರ ಆಕೆಯ ಗತಿಯೇನು ಎಂಬ ಚಿಂತೆ ಸದಾ ಇವರುಗಳನ್ನು ಕಾಡುತ್ತಿತ್ತು. ಸಂಬಂಧಿಗಳ ಬಳಿ ಬಿಟ್ಟರೆ ಆಸ್ತಿ ಆಸೆಗಾಗಿ ಮಗಳಿಗೆ ಏನಾದರೂ ಮಾಡಿದರೆ ಗತಿಯೇನು ಎಂಬ ಆತಂಕವೂ ಇತ್ತು.

ತಾವು ಆರೋಗ್ಯವಾಗಿರುವವಾಗಲೇ ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕೆಂದು ನಿಶ್ಚಯಿಸಿದ ದಂಪತಿ, ಕೇರಳದ ಸಮಾಜ ಕಲ್ಯಾಣ ಇಲಾಖೆಯ ಮೊರೆ ಹೋಗಿದ್ದರು. ತಮ್ಮ 3 ಕೋಟಿ ರೂ. ಮೌಲ್ಯದ ಮನೆಯನ್ನು ಬುದ್ಧಿಮಾಂದ್ಯ ಮಹಿಳೆಯರ ನೆಲೆಯನ್ನಾಗಿ ಪರಿವರ್ತಿಸಿ ಅಲ್ಲಿ ತಮ್ಮ 37 ವರ್ಷದ ಪುತ್ರಿಗೂ ಆಶ್ರಯ ಕಲ್ಪಿಸಬೇಕೆಂದು ಮನವಿ ಮಾಡಿದ್ದರು.

ಸಮಾಜ ಕಲ್ಯಾಣ ಇಲಾಖೆ, ಈ ಮನವಿಯನ್ನು ಸರ್ಕಾರಕ್ಕೆ ಕಳುಹಿಸಿದ್ದು, ಇದಕ್ಕೆ ಈಗ ಸರ್ಕಾರ ಒಪ್ಪಿಗೆ ನೀಡಿದೆ. ದಂಪತಿಗಳ ಮನೆ ಶೀಘ್ರದಲ್ಲೇ ಬುದ್ಧಿಮಾಂದ್ಯ ಮಹಿಳೆಯರ ವಸತಿ ನಿಲಯವಾಗಿ ಪರಿವರ್ತನೆಯಾಗಲಿದೆ. ಸರ್ಕಾರದ ಸ್ಪಂದನೆಗೆ ಸಂತಸಗೊಂಡಿರುವ ದಂಪತಿಗಳು, ತಮ್ಮ ಮರಣದ ನಂತರ ಈಗ ವಾಸವಾಗಿರುವ ನಿವಾಸವನ್ನೂ ನೀಡಲು ಮುಂದಾಗಿದ್ದು, ಇದರ ಮೌಲ್ಯ 4 ಕೋಟಿ ರೂಪಾಯಿಗಳೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...