alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಕಾರಕ್ಕೆ ಪಾಠ ಕಲಿಸಿದ ಹಳ್ಳಿ ಜನ

dam

ಸರ್ಕಾರವನ್ನು ನಂಬಿದ್ರೆ ಯಾವ ಕೆಲಸವೂ ಆಗೋದಿಲ್ಲ ಅನ್ನೋ ಕಹಿ ಸತ್ಯ ಉತ್ತರಪ್ರದೇಶದ ರಾಯ್ ಬರೇಲಿ ಜನತೆಗೆ ಅರ್ಥವಾಗಿದೆ. ಹಾಗಾಗಿ ಸರ್ಕಾರದ ಸಹವಾಸವೇ ಬೇಡ ಎಂದುಕೊಂಡ ಜನ, ತಾವೇ ಖುದ್ದಾಗಿ ಆಣೆಕಟ್ಟು ನಿರ್ಮಾಣ  ಮಾಡ್ತಿದ್ದಾರೆ.

ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದ ಡ್ಯಾಂ ಇದು, 1990ರಲ್ಲಿ ಹಾನಿಗೊಳಗಾಗಿದೆ. ಇದ್ರಿಂದಾಗಿ ಬಹೇರಿ ಸುತ್ತಮುತ್ತಲ 25 ಗ್ರಾಮಗಳಲ್ಲಿ ನೀರಿನ ಬವಣೆ. ಕಳೆದ 2 ದಶಕಗಳಿಂದ ಗ್ರಾಮಸ್ಥರು ನೀರಿಗಾಗಿ ಪರದಾಟ ನಡೆಸುತ್ತಿದ್ದಾರೆ, ಆಣೆಕಟ್ಟು ನಿರ್ಮಿಸಿ ಕೊಡುವಂತೆ ಸರ್ಕಾರಕ್ಕೆ ಮನವಿ ಕೊಟ್ಟು ಕೊಟ್ಟು ಸೋತಿದ್ದಾರೆ.

ಇನ್ನು ಸರ್ಕಾರವನ್ನು ನಂಬಿ ಕೂತ್ರೆ ಕೆಲಸ ಅಸಾಧ್ಯ ಎಂದುಕೊಂಡ ಗ್ರಾಮಸ್ಥರೆಲ್ಲ ಒಟ್ಟಾಗಿ 70,000 ರೂಪಾಯಿ ಸಂಗ್ರಹಿಸಿದ್ದಾರೆ. ಇನ್ನು ಕೆಲವರು ಕಚ್ಚಾ ವಸ್ತುಗಳನ್ನು ನೀಡಿದ್ದಾರೆ. ಮಣ್ಣು, ಮರಳು, ಸಿಮೆಂಟ್ ಎಲ್ಲವನ್ನೂ ತಂದಿರುವ ಸಾರ್ವಜನಿಕರು ಡ್ಯಾಂ ಕಟ್ಟಲು ಶುರು ಮಾಡಿದ್ದಾರೆ. 98 ಅಡಿ ಉದ್ದ, 28 ಅಡಿ ಅಗಲದ ಡ್ಯಾಂ ಅನ್ನು ನಿರ್ಮಾಣ ಮಾಡ್ತಿದ್ದಾರೆ. ಪಕ್ಕದ ಖಮರಿಯಾ ಗ್ರಾಮದ ನಿವಾಸಿಗಳು ಕೂಡ ಇವರಿಗೆ ಸಾಥ್ ಕೊಟ್ಟಿರೋದು ವಿಶೇಷ. ಡ್ಯಾಂ ನಿರ್ಮಾಣ ಮಾಡುತ್ತಿರುವ ಗ್ರಾಮಸ್ಥರಿಗೆ ಈಗ ಜೈಜೈ ಎನ್ನುತ್ತಿರುವ ಜನಪ್ರತಿನಿಧಿಗಳೆಲ್ಲ 25 ವರ್ಷಗಳಿಂದ ಏನು ಮಾಡುತ್ತಿದ್ರು ಅನ್ನೋದು ಎಲ್ಲರ ಪ್ರಶ್ನೆ.

Subscribe Newsletter

Get latest updates on your inbox...

Opinion Poll

  • ರಾಜ್ಯ ಸರ್ಕಾರ ಪತನಗೊಳಿಸುವ ಪ್ರಯತ್ನದ ಹಿಂದಿದೆಯಾ ಬಿಜೆಪಿ ನಾಯಕರ ಪಾತ್ರ...?

    View Results

    Loading ... Loading ...