alex Certify
ಕನ್ನಡ ದುನಿಯಾ       Mobile App
       

Kannada Duniya

ಕಂಡಕಂಡಲ್ಲಿ ಉಗುಳಿದ್ರೆ 6 ತಿಂಗಳು ಜೈಲು

spit

ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರಿ ಕಚೇರಿಗಳಲ್ಲಿ ತಂಬಾಕು, ಗುಟ್ಕಾ ಬ್ಯಾನ್ ಮಾಡಿರೋ ಬೆನ್ನಲ್ಲೇ ಉತ್ತರಾಖಂಡ್ ಸರ್ಕಾರ ಕೂಡ ಅಂಥದ್ದೇ ಸ್ವಚ್ಛತಾ ಅಭಿಯಾನಕ್ಕೆ ಕೈಹಾಕಿದೆ. ಸಾರ್ವಜನಿಕ ಸ್ಥಳಗಳು ಹಾಗೂ ಕಚೇರಿ ಆವರಣದಲ್ಲಿ ಉಗುಳುವುದು, ಕಸ ಚೆಲ್ಲುವುದು ಕಂಡು ಬಂದಲ್ಲಿ 5000 ರೂಪಾಯಿ ದಂಡ ಹಾಗೂ 6 ತಿಂಗಳು ಜೈಲುಶಿಕ್ಷೆ ವಿಧಿಸುವುದಾಗಿ ತ್ರಿವೇಂದ್ರ ಸಿಂಗ್ ರಾವತ್ ಸರ್ಕಾರ ಎಚ್ಚರಿಸಿದೆ.

ಕಳೆದ ನವೆಂಬರ್ ನಲ್ಲಿ ಅಂಗೀಕಾರವಾಗಿರುವ ಕಸ ವಿರೋಧಿ ಕಾನೂನನ್ನು ಎಲ್ಲಾ ಪುರಸಭೆಗಳಲ್ಲಿ ಜಾರಿ ಮಾಡುತ್ತಿರುವುದಾಗಿ ನಗರಾಭಿವೃದ್ಧಿ ಇಲಾಖೆ ತಿಳಿಸಿದೆ. ಕಠಿಣ ಕ್ರಮದ ಮೂಲಕ ಜನರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವುದು ಸರ್ಕಾರದ ಉದ್ದೇಶ. ಸದ್ಯ ಹೊಸ ನಿಯಮವನ್ನು ನಗರಪ್ರದೇಶಗಳಲ್ಲಿ ಜಾರಿ ಮಾಡಲಾಗ್ತಿದೆ. ನಂತರದ ದಿನಗಳಲ್ಲಿ ಹಳ್ಳಿಗಳಲ್ಲೂ ಈ ಬಗ್ಗೆ ಜಾಗೃತಿ ಮೂಡಿಸುವುದಾಗಿ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಕಂಡಕಂಡಲ್ಲಿ ಉಗುಳಿದ್ರೆ 5000 ರೂಪಾಯಿ ದಂಡ ವಿಧಿಸಲಾಗುತ್ತದೆ, ಮತ್ತದೇ ತಪ್ಪು ಮಾಡಿದವರನ್ನು 6 ತಿಂಗಳು ಜೈಲಿಗೆ ಹಾಕಲಾಗುತ್ತದೆ. ಸ್ವಚ್ಛತೆಯ ಬಗ್ಗೆ ಗಮನಹರಿಸಲು ತಂಡಗಳನ್ನು ರಚಿಸಲಾಗಿದೆ. ಪ್ರತಿನಿತ್ಯ ಈ ತಂಡ ನಗದಾದ್ಯಂತ ಪರಿಶೀಲನೆ ನಡೆಸಲಿದೆ. ಯಾರಾದ್ರೂ ನಿಯಮ ಉಲ್ಲಂಘಿಸೋದು ಕಂಡು ಬಂದಲ್ಲಿ ಸ್ಥಳದಲ್ಲೇ ಅವರಿಗೆ ದಂಡ ಹಾಕಲಾಗುತ್ತದೆ. ಸರ್ಕಾರದ ಹೊಸ ನಿಯಮವನ್ನು ಸಾರ್ವಜನಿಕರು ಸ್ವಾಗತಿಸಿದ್ದು, ದೇಶಾದ್ಯಂತ ಈ ಕಠಿಣ ನಿಯಮ ಜಾರಿಯಾಗಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...