alex Certify
ಕನ್ನಡ ದುನಿಯಾ       Mobile App
       

Kannada Duniya

ತಂದೆ ಜೊತೆ ಹಲಾಲಾ ನಂತ್ರ ತಾಯಿಯಾದ ಪತ್ನಿ : ಮಗು ತನ್ನದಲ್ಲ ಎಂದ ಪತಿ

ಉತ್ತರ ಪ್ರದೇಶದ ಬರೇಲಿಯಲ್ಲಿ ತಲಾಕ್, ನಿಖಾ ಹಾಗೂ ಹಲಾಲಾಕ್ಕೆ ಸಂಬಂಧಿಸಿದ ನಾಚಿಕೆಗೇಡಿ ಘಟನೆಯೊಂದು ನಡೆದಿದೆ. ಪತ್ನಿಗೆ ತಲಾಕ್ ನೀಡಿದ್ದ ಪತಿ ಎರಡನೇ ಬಾರಿ ಮದುವೆಯಾಗಲು ಹಲಾಲಾ ಮಾಡಿಕೊಳ್ಳುವಂತೆ ಒತ್ತಡ ಹೇರಿದ್ದಾನೆ. ಹಲಾಲಾ ನಂತ್ರ ಮಹಿಳೆ ಗರ್ಭ ಧರಿಸಿದ್ದು, ಈ ಮಗು ತನ್ನದಲ್ಲ ಎಂಬ ಕಾರಣ ನೀಡಿ ಮತ್ತೆ ಮದುವೆಯಾಗಲು ನಿರಕಾರಿಸಿದ್ದಾನೆ.

2015 ರಲ್ಲಿ ಪೀಡಿತೆ ಮದುವೆಯಾಗಿತ್ತು. ಕೆಲವೇ ದಿನಗಳಲ್ಲಿ ವರದಕ್ಷಿಣೆ ಕಿರುಕುಳ ಶುರು ಮಾಡಿದ್ದ ಆರೋಪಿ ಪತಿ, ಪತ್ನಿಯನ್ನು ಮನೆಯಿಂದ ಹೊರ ಹಾಕಿದ್ದ. ನಂತ್ರ ಫೋನಿನಲ್ಲಿ ತಲಾಖ್ ನೀಡಿದ್ದ. ಪ್ರಕರಣ ಇತ್ಯರ್ಥಕ್ಕೆ ಬಂದ ಮೇಲೆ ಹಲಾಲಾ ಮಾಡಿಕೊಂಡಲ್ಲಿ ಮತ್ತೆ ಮದುವೆಯಾಗ್ತೇನೆಂದು ಭರವಸೆ ನೀಡಿದ್ದ.

ಇದೇ ಕಾರಣಕ್ಕೆ ಮಹಿಳೆ ಪತಿಯ ತಂದೆ (ಮಾವ)ಯನ್ನೇ ಎರಡನೇ ಮದುವೆಯಾಗಿದ್ದಾಳೆ. 15 ದಿನಗಳ ಕಾಲ ಪದ್ಧತಿ ಅನುಸರಿಸಿದ್ದಾಳೆ. ಈ ಮಧ್ಯೆ ಹಳೆ ಪತಿ ಮಹಿಳೆ ಜೊತೆ ಸಂಬಂಧ ಬೆಳೆಸಿದ್ದನಂತೆ. ತಂದೆ ತಲಾಖ್ ನೀಡಿದ ನಂತ್ರ ಮಗ ಮತ್ತೆ ಎರಡನೇ ಮದುವೆಯಾಗಿದ್ದಾನೆ. ಆಗ ಪತ್ನಿ ಗರ್ಭಿಣಿ ಎಂಬುದು ಗೊತ್ತಾಗಿದೆ. ಮಗು ತೆಗೆಸುವಂತೆ ಒತ್ತಡ ಹೇರಿದ್ದ ಪತಿ ನಂತ್ರ ಮಗು ನನ್ನದಲ್ಲವೆಂದು ವಾದ ಮಾಡ್ತಿದ್ದಾನಂತೆ. ಡಿಎನ್ ಎ ಪರೀಕ್ಷೆಗೂ ಸಿದ್ಧ ಎಂದಿರುವ ಮಹಿಳೆ ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...