alex Certify
ಕನ್ನಡ ದುನಿಯಾ       Mobile App
       

Kannada Duniya

15 ಕೋಟಿ ಮೌಲ್ಯದ ಬಂಗಲೆಗೆ ಶಿಫ್ಟ್ ಆಗ್ತಿದ್ದಾರೆ ಮಾಯಾವತಿ

ಸರ್ಕಾರಿ ವಸತಿಗಳನ್ನು ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಬಿ ಎಸ್ ಪಿ ನಾಯಕಿ ಮಾಯಾವತಿ ತಮ್ಮ ನಿವಾಸವನ್ನು ಬದಲಾಯಿಸುತ್ತಿದ್ದಾರೆ. 2010 ರಲ್ಲಿ ಖರೀದಿಸಿದ್ದ 15 ಕೋಟಿ ಮೌಲ್ಯದ ಬಂಗಲೆಗೆ ತಮ್ಮ ವಸ್ತುಗಳನ್ನು ಸಾಗಿಸಲು ಸಿಬ್ಬಂದಿಗೆ ತಿಳಿಸಿದ್ದಾರಂತೆ.

ಬಿ ಎಸ್ ಪಿ ನಾಯಕಿ ಮಾಯಾವತಿ ಪ್ರಸ್ತುತ ಲಕ್ನೋನಲ್ಲಿ 13-ಎ ಮಾಲ್ ಅವೆನ್ಯೂ ಸರ್ಕಾರಿ ಬಂಗಲೆಯಲ್ಲಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದ ಬಳಿಕ ಶೀಘ್ರವೇ ತಮ್ಮ ನಿವಾಸವನ್ನು ಬದಲಾಯಿಸಲು ರೆಡಿಯಾಗ್ತಿದ್ದಾರೆ.

ಉತ್ತರ ಪ್ರದೇಶ ರಾಜಧಾನಿ ಲಕ್ನೋದಲ್ಲಿರುವ ಇವರ ಬಂಗಲೆ ಮರ ಮತ್ತು ಕೆಂಪು ಕಲ್ಲುಗಳಿಂದ ನಿರ್ಮಾಣವಾಗಿದೆ. 71,000 ಚದರಡಿಯಲ್ಲಿ ಈ ಬೃಹತ್ ಬಂಗಲೆಯನ್ನು ಮಾಯಾವತಿ ಅಧಿಕಾರದಲ್ಲಿದ್ದಾಗ ಖರೀದಿಸಿದ್ದರು.

ಮಾಯಾವತಿ 2012 ರಲ್ಲಿ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿದ್ದಾಗ ಆಸ್ತಿ ವಿವರ ಸಲ್ಲಿಸಿದ್ರು. ಅದರಲ್ಲಿ ತಮ್ಮ ಈ 9-ಮಾಲ್ ಅವೆನ್ಯೂ ಬಂಗಲೆಯನ್ನು 2010ರಲ್ಲಿ 15 ಕೋಟಿ ರೂಪಾಯಿಗೆ ಕೊಂಡುಕೊಂಡಿದ್ದಾಗಿ ತಿಳಿಸಿದ್ರು. ಇನ್ನು ದೆಹಲಿಯ ಎಸ್.ಪಿ. ರೋಡ್ ನಲ್ಲೂ ಆಸ್ತಿಯನ್ನು 2009 ರಲ್ಲಿ ಖರೀದಿಸಿದ್ದಾಗಿ ತಿಳಿಸಿದ್ರು.

ಮಾಯಾವತಿಯವರ ಸ್ವಂತ ಬಂಗಲೆ, ಅವರು ಈಗಿರುವ ಸರ್ಕಾರಿ ಬಂಗಲೆಗಿಂತ ಎರಡು ಪಟ್ಟು ದೊಡ್ಡದಿದೆ. ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ಮಾಯಾವತಿಗೆ ಸುಪ್ರೀಂ ಕೋರ್ಟ್ ಹೇಳ್ತಿದ್ದಂತೆ, ಇತ್ತ ಉತ್ತರ ಪ್ರದೇಶದ ಎಸ್ ಪಿ ಮುಖಂಡ ಮುಲಾಯಂ ಸಿಂಗ್ ಯಾದವ್ ಸರ್ಕಾರಿ ನಿವಾಸ ವಿಕ್ರಮಾದಿತ್ಯವನ್ನು ತೆರವುಗೊಳಿಸಲು ಮುಂದಾಗಿದ್ದಾರೆ. ಹಾಗೆಯೇ ಹೊಸ ಬಂಗಲೆಯ ಹುಡುಕಾಟದಲ್ಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...