alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಶಿಕ್ಷಕಿಯರು ಜೈಲು ಪಾಲು

ಪಟನಾ : ಐದು ವರ್ಷದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಪಟನಾ ಸಿಟಿ ನ್ಯಾಯಾಲಯ ಇಬ್ಬರು ಶಿಕ್ಷಕಿಯರನ್ನು ಜೈಲಿಗಟ್ಟಿದೆ.

ಫೋಕ್ಸೋ ಕಾಯ್ದೆಯಡಿ ಇಬ್ಬರ ಪೈಕಿ ಒಬ್ಬಳಿಗೆ 10 ಹಾಗೂ ಮತ್ತೊಬ್ಬಳಿಗೆ 7 ವರ್ಷ ಜೈಲು ಶಿಕ್ಷೆ ಹಾಗೂ ತಲಾ 20 ಸಾವಿರ ದಂಡ ವಿಧಿಸಿ, ನ್ಯಾಯಮೂರ್ತಿ ರವೀಂದ್ರನಾಥ್‌ ತ್ರಿಪಾಠಿ ತೀರ್ಪು ನೀಡಿದ್ದಾರೆ.

2016 ರ ನವಂಬರ್‌ನಲ್ಲಿ ಪಟನಾದ ಮಹಿಳಾ ಠಾಣೆಯಲ್ಲಿ ಹುಡುಗಿಯ ಪಾಲಕರು ಇಬ್ಬರು ಶಿಕ್ಷಕಿಯರ ವಿರುದ್ಧ ದೂರು ನೀಡಿದ್ದರು. ಶಿಕ್ಷಕಿಯರು ತರಗತಿಯಲ್ಲಿ ಬಾಲಕಿಯನ್ನು ವಿವಸ್ತ್ರಗೊಳಿಸಿ, ಲೈಂಗಿಕ ಕಿರುಕುಳ ನೀಡಿದ್ದರು ಎಂದು ದೂರು ನೀಡಿದ್ದರು. ವೈದ್ಯಕೀಯ ಪರೀಕ್ಷೆಯಲ್ಲೂ ಇದು ಸಾಬೀತಾಗಿತ್ತು ಎಂದು ಸರಕಾರಿ ಅಭಿಯೋಜಕ ಸುರೇಶ್‌ ಚಂದ್ರ ಪ್ರಸಾದ್‌ ಮಾಹಿತಿ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...