alex Certify
ಕನ್ನಡ ದುನಿಯಾ       Mobile App
       

Kannada Duniya

ಕೇರಳದಲ್ಲೊಂದು ಹೃದಯ ವಿದ್ರಾವಕ ಘಟನೆ

ಕೊಚ್ಚಿ: ಪ್ರವಾಹದ ನೀರಿನಲ್ಲಿ ಸ್ವಂತ ಸೂರು ಹಾನಿಗೀಡಾಗಿದ್ದನ್ನು ಕಂಡ ವ್ಯಕ್ತಿಯೋರ್ವ ಅದೇ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕಾರಿ ಘಟನೆ ಎರ್ನಾಕುಲಂನಲ್ಲಿ ನಡೆದಿದೆ. ದಿನಗೂಲಿ ಕಾರ್ಮಿಕ ರಾಕಿ ಆತ್ಮಹತ್ಯೆ ಮಾಡಿಕೊಂಡವರು.

ಪ್ರವಾಹದ ನೀರಿನಲ್ಲಿ ಭಾಗಶಃ ಮನೆ ಮುಳುಗಿದ್ದು, ಸಂತ್ರಸ್ಥರ ಕ್ಯಾಂಪ್‌ನಲ್ಲಿ ಆಶ್ರಯ ಪಡೆದಿದ್ದ ರಾಕಿ, ಕುಟುಂಬ ಸದಸ್ಯರ ಜತೆ ಮನೆ ಸ್ವಚ್ಛಗೊಳಿಸಲು ತೆರಳಿದ್ದರು. ಆದರೆ ರಾತ್ರಿ ಎಷ್ಟು ಹೊತ್ತಾದರೂ ಶಿಬಿರಕ್ಕೆ ಮರಳಿಲ್ಲ. ಬುಧವಾರ ಬೆಳಗ್ಗೆ ರಾಕಿಯನ್ನು ಹುಡುಕಿಕೊಂಡು ಸ್ಥಳೀಯರು ಮನೆ ಬಳಿ ಬಂದಿದ್ದು, ಭಾಗಶಃ ನೀರು ತುಂಬಿದ ಮನೆಯಲ್ಲಿ ನೇಣು ಬಿಗಿದುಕೊಂಡು ರಾಕಿ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

ಇದಲ್ಲದೆ ಇಂತಹುದೇ ಮತ್ತೆರಡು ಪ್ರಕರಣಗಳು ಕೇರಳದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉಂಟಾಗಿರುವ ನೈಸರ್ಗಿಕ ವಿಕೋಪದಿಂದಾಗಿ ಜನರು ಮಾನಸಿಕವಾಗಿ ನೊಂದಿದ್ದಾರೆ. ಕೌನ್ಸಲಿಂಗ್‌ನ ಅವಶ್ಯಕತೆ ಇದ್ದು, ಅಗತ್ಯ ನೆರವು ಸರಕಾರ ನೀಡಲಿದೆ ಎಂದು ಆರೋಗ್ಯ ಸಚಿವೆ ಶೈಲಜಾ ತಿಳಿಸಿದ್ದಾರೆ.

ಈ ಬಾರಿ ಮುಂಗಾರು ಮಳೆಗೆ ಕೇರಳದಲ್ಲಿ 370 ಮಂದಿ ಮೃತಪಟ್ಟಿದ್ದು, 1924 ರ ಬಳಿಕ ನಡೆದ ಅತ್ಯಂತ ದೊಡ್ಡ ನೈಸರ್ಗಿಕ ವಿಕೋಪ ಎನ್ನಲಾಗಿದೆ. ರಾಜ್ಯದಲ್ಲಿ ಸುಮಾರು 3 ಸಾವಿರ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...