alex Certify
ಕನ್ನಡ ದುನಿಯಾ       Mobile App
       

Kannada Duniya

ಯುಪಿ ಸರ್ಕಾರದ ಟ್ವಿಟ್ಟರ್ ಮೇಲೂ ಎಸ್ಪಿ ಸೋಲಿನ ಎಫೆಕ್ಟ್

twitter

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಹೀನಾಯ ಸೋಲಿನ ನಂತರ ರಾಜ್ಯ ಸರ್ಕಾರದ ಎಲ್ಲಾ ಚಟುವಟಿಕೆಗಳಿಗೂ ಬ್ರೇಕ್ ಬಿದ್ದಂತಾಗಿದೆ. ಇದ್ದಕ್ಕಿದ್ದಂತೆ ನಿನ್ನೆ ಸರ್ಕಾರದ ಅಧಿಕೃತ ಟ್ವಿಟ್ಟರ್ ಪೇಜ್ ಬ್ಲಾಂಕ್ ಆಗಿದೆ. ಎಲ್ಲಾ ಪೋಸ್ಟ್ ಗಳನ್ನೂ ಡಿಲೀಟ್ ಮಾಡಲಾಗಿದೆ.

ಅಷ್ಟೇ ಎಲ್ಲ ಎಷ್ಟೋ ಅಕೌಂಟ್ ಗಳನ್ನು ಅನ್ ಫಾಲೋ ಮಾಡಲಾಗಿದೆ. ಮಾರ್ಚ್ 11ರಂದು ಉತ್ತರಪ್ರದೇಶ ಚುನಾವಣಾ ಫಲಿತಾಂಶ ಪ್ರಕಟವಾಗಿತ್ತು. ಅದಾಗಿ 3 ದಿನಗಳ ನಂತರ ಟ್ವಿಟ್ಟರ್ ಪೇಜ್ ಖಾಲಿ ಹೊಡೆಯುತ್ತಿದೆ. ಟ್ವಿಟ್ಟರ್ ಹ್ಯಾಂಡಲ್ ಮಾಡ್ತಾ ಇದ್ದ ಯುಪಿ ಸಿಎಂ ಕಚೇರಿ ‘ಡಿಲೀಟ್ ಆಲ್ ಟ್ವೀಟ್ಸ್’ ಎಂಬ ಆನ್ ಲೈನ್ ಸೇವೆಗೆ ರಿಜಿಸ್ಟರ್ ಮಾಡಿಸಿಕೊಂಡಿದೆ.

ಆದ್ರೆ ಎಲ್ಲಾ ಟ್ವೀಟ್ ಗಳನ್ನು ಡಿಲೀಟ್ ಮಾಡಿಲ್ಲ, ಆರ್ಖೈವ್ ನಲ್ಲಿ ಇಡಲಾಗಿದೆ ಅಂತಾ ಸಮರ್ಥಿಸಿಕೊಂಡಿದೆ. ‘ಯುಪಿ ನ್ಯೂಸ್ 360’ ಎಂಬ ಇನ್ನೊಂದು ಅಕೌಂಟ್ ನಲ್ಲೂ ಎಲ್ಲಾ ಟ್ವೀಟ್ ಗಳನ್ನು ಡಿಲೀಟ್ ಮಾಡಲಾಗಿದೆ. ಇದು ಉತ್ತರ ಪ್ರದೇಶದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಸೇರಿದ ಟ್ವಿಟ್ಟರ್ ಖಾತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...