alex Certify
ಕನ್ನಡ ದುನಿಯಾ       Mobile App
       

Kannada Duniya

ಅಯ್ಯಪ್ಪನ ಅನುಗ್ರಹದಿಂದ ಫಾತಿಮಾಗೆ ಆಯ್ತಂತೆ ವರ್ಗಾವಣೆ

ತಿರುವನಂತಪುರಂ: ಅಯ್ಯಪ್ಪ ಸ್ವಾಮಿ ಭಕ್ತರ ತೀವ್ರ ವಿರೋಧದ ನಡುವೆಯೂ ಶಬರಿಮಲೆ ಪ್ರವೇಶಕ್ಕೆ ಮುಂದಾದ ಬಿಎಸ್ಎನ್ಎಲ್ ಉದ್ಯೋಗಿ ರೆಹನಾ ಫಾತಿಮಾಗೆ ಈಗ ವರ್ಗಾವಣೆಯಾಗಿದೆ. ಇದೆಲ್ಲಾ ಅಯ್ಯಪ್ಪನ ಅನುಗ್ರಹದಿಂದ ಆಗಿದ್ದು ಎನ್ನುತ್ತಾರೆ ರೆಹನಾ.

ರೆಹನಾ ಫಾತಿಮಾ ಬಿಎಸ್ಎನ್ಎಲ್ ಕೊಚ್ಚಿ ಬೋಟಿ ಜೆಟ್ಟಿ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ರೆಹನಾ ಶಬರಿಮಲೆ ಪ್ರವೇಶಿಸಿದ ಹಿನ್ನೆಲೆ ಈಗ ಅವರನ್ನು ರವಿಪುರಂ ಶಾಖೆಗೆ ವರ್ಗಾವಣೆ ಮಾಡಲಾಗಿದೆ. ಇದರ ಬಗ್ಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ ರೆಹನಾ.

ಮನೆಯ ಪಕ್ಕದಲ್ಲಿರುವ ಶಾಖೆಗೆ ವರ್ಗಾವಣೆ ಕೋರಿ 5 ವರ್ಷಗಳ ಹಿಂದೆಯೇ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರಂತೆ ರೆಹನಾ. ಆದರೆ ಆಗ ಸಾಧ್ಯವಾಗದ್ದು ಶಬರಿಮಲೆ ಹತ್ತಿದ ನಂತರ ಸಾಧ್ಯವಾಯಿತು. ಇದೆಲ್ಲವೂ ಅಯ್ಯಪ್ಪನ ದಯೆಯಿಂದ ಆಗಿದ್ದು. ಮೊದಲಾದರೆ ಟ್ರಾಫಿಕ್ ಜ್ಯಾಂ ನಡುವೆ ಆಫೀಸ್ ಗೆ ಹೋಗಬೇಕಿತ್ತು. ಈಗ ಮನೆಗೆ ಸಮೀಪದಲ್ಲಿಯೇ ಆಫೀಸ್ ಇದೆ. 2 ನಿಮಿಷದಲ್ಲಿಯೇ ಹೋಗಬಹುದು. ಹಾಗೇ ವರ್ಗಾವಣೆಗೆ ಶ್ರಮಿಸಿದ ಅಧಿಕಾರಿಗಳಿಗೆ ಒಳ್ಳೆಯದಾಗಲಿ ಎಂದು ರೆಹನಾ ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...