alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವಿಚಾರದಲ್ಲಿ ಗ್ರಾಮಸ್ಥರದ್ದೇನು ತಪ್ಪಿದೆ ನೀವೇ ಹೇಳಿ…!

ಭಾರತದಲ್ಲಿ ಇನ್ನೂ ಸಹಸ್ರಾರು ಹಳ್ಳಿಗಳಿಗೆ ವೈದ್ಯಕೀಯ ಸೇವೆ ಮರೀಚಿಕೆಯಾಗಿದೆ. ಕೃಷಿ ಕಾರ್ಮಿಕರೇ ಹೆಚ್ಚಾಗಿರುವ ಗ್ರಾಮಾಂತರ ಪ್ರದೇಶಗಳು ಸ್ವಾತಂತ್ರ್ಯ ಲಭಿಸಿದ ಇಷ್ಟು ವರ್ಷಗಳ ಬಳಿಕವೂ ಮೂಲಭೂತ ಸೌಕರ್ಯದಿಂದ ವಂಚಿತವಾಗಿವೆ.

ಇದನ್ನೇ ಬಂಡವಾಳವನ್ನಾಗಿಸಿಕೊಂಡ ಹಲವರು ಹಳ್ಳಿಗರ ಮುಗ್ದತೆಯನ್ನೇ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆನ್ನುವುದಕ್ಕೆ ಈ ಪ್ರಕರಣ ಜ್ವಲಂತ ಸಾಕ್ಷಿಯಾಗಿದೆ. ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ಕ್ಲಿನಿಕ್ ತೆರೆದಿದ್ದ ನಕಲಿ ವೈದ್ಯನೊಬ್ಬ ಬಳಸಿದ ಸಿರಿಂಜ್ ನ್ನೇ ಇಂಜೆಕ್ಷನ್ ನೀಡಲು ಪದೇ ಪದೇ ಉಪಯೋಗಿಸಿದ ಕಾರಣಕ್ಕೆ ತಮ್ಮದಲ್ಲದ ತಪ್ಪಿಗೆ 40 ಮಂದಿ ಅಮಾಯಕರು ಹೆಚ್.ಐ.ವಿ. ಪೀಡಿತರಾಗುವಂತೆ ಮಾಡಿದ್ದಾನೆ.

ಆರೋಗ್ಯ ತಪಾಸಣೆ ಸಂದರ್ಭದಲ್ಲಿ ಈ ಬೆಚ್ಚಿ ಬೀಳಿಸುವ ಸಂಗತಿ ಬಯಲಾಗಿದ್ದು, ಇದೀಗ ನಕಲಿ ವೈದ್ಯ ರಾಜೇಶ್ ಯಾದವ್ ನ ಬಂಧನವಾಗಿದೆ. ಆದರೆ ಈತ ಮಾಡಿದ ತಪ್ಪಿಗೆ 40 ಮಂದಿ ಅಮಾಯಕರು ಜೀವನಪೂರ್ತಿ ಪರಿತಪಿಸುವಂತಾಗಿದೆ. ಅಷ್ಟೇ ಅಲ್ಲ, ಈ ವಿಚಾರ ಮಾಧ್ಯಮಗಳಲ್ಲಿ ಬಹಿರಂಗವಾಗುತ್ತಿದ್ದಂತೆಯೇ ಆ ಗ್ರಾಮದ ಜನರೊಂದಿಗೆ ಸುತ್ತಮುತ್ತಲಿನವರು ಸಂಪರ್ಕವನ್ನೇ ಬಿಡುತ್ತಿದ್ದಾರೆ.

ಆಘಾತಕಾರಿ ಸಂಗತಿಯೆಂದರೆ ಈಗಾಗಲೇ ಈ ಗ್ರಾಮದ ಯುವತಿಯೊಂದಿಗೆ ವಿವಾಹ ನಿಶ್ಚಿತಾರ್ಥಗೊಂಡಿದ್ದವರು ಸಂಬಂಧವನ್ನೇ ಕಡಿದುಕೊಳ್ಳುತ್ತಿದ್ದಾರೆ. ತಮ್ಮ ಕುಟುಂಬದ ಯಾರಿಗೂ ಹೆಚ್.ಐ.ವಿ. ಸೋಂಕು ತಗುಲಿಲ್ಲವೆಂದು ಹೇಳಿದರೂ ಅವರುಗಳು ಕೇಳಲು ತಯಾರಿಲ್ಲ. ಹೀಗಾಗಿ ತಮ್ಮ ಮುಂದಿನ ಭವಿಷ್ಯ ನೆನೆದು ಬಹುತೇಕ ಗ್ರಾಮಸ್ಥರು ಗ್ರಾಮ ತೊರೆದು ಬೇರೆಡೆ ನೆಲೆಸಲು ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...