alex Certify
ಕನ್ನಡ ದುನಿಯಾ       Mobile App
       

Kannada Duniya

ತಾಯಿ, ಪತ್ನಿಯೊಂದಿಗೆ ಇರಿ: ಮೋದಿಗೆ ಕೇಜ್ರಿವಾಲ್ ಟಾಂಗ್

keji

ನವದೆಹಲಿ: ನಾನು ಇಂದು ನಿತ್ಯದಂತೆ ಯೋಗ ಮಾಡಲು ಹೋಗಲಿಲ್ಲ. ತಾಯಿಯನ್ನು ಭೇಟಿಯಾಗಿ ಅವರೊಂದಿಗೆ ಉಪಾಹಾರ ಸೇವಿಸಿದ್ದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿರುವುದಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟಾಂಗ್ ಕೊಟ್ಟಿದ್ದಾರೆ.

ಮೋದಿ ರಾಜಕಾರಣಕ್ಕಾಗಿ ಅಮ್ಮನನ್ನು ಎಳೆದು ತರಬಾರದು ಎಂದು ಹೇಳಿದ್ದಾರೆ. ನಾನು ತಾಯಿಯೊಂದಿಗೆ ವಾಸಿಸುತ್ತಿದ್ದೇನೆ. ದಿನವೂ ಅವರಿಂದ ಆಶೀರ್ವಾದ ಪಡೆಯುತ್ತೇನೆ. ಎಲ್ಲಿಯೂ ಅದನ್ನು ಡಂಗುರ ಹೊಡೆದು ಸಾರುವುದಿಲ್ಲ ಎಂದು ತಿಳಿಸಿದ್ದಾರೆ.

ನೋಟ್ ಬ್ಯಾನ್ ಮಾಡಿದಾಗ, ತಮ್ಮ ತಾಯಿಯನ್ನು ಸರದಿ ಸಾಲಿನಲ್ಲಿ ನಿಲ್ಲಿಸಿ, ರಾಜಕೀಯ ಮಾಡಿದ್ದ ಮೋದಿ, ಈಗ ತಾಯಿ ಭೇಟಿ ಮಾಡಿದ್ದನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ನಾನು ತಾಯಿಯನ್ನು ರಾಜಕೀಯ ಕಾರಣಕ್ಕೆ, ಬ್ಯಾಂಕ್ ಗೆ ಕಳುಹಿಸಿ ಸರದಿ ಸಾಲಿನಲ್ಲಿ ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ. ಹಿಂದೂ ಧರ್ಮದ ಪ್ರಕಾರ, ನಿಮ್ಮ ತಾಯಿ ಹಾಗೂ ಪತ್ನಿಯನ್ನು ನಿಮ್ಮ ಜೊತೆಗೆ ವಾಸಿಸಲು ಅವಕಾಶ ಮಾಡಿಕೊಡಬಹುದಾಗಿದೆ. ನಿಮ್ಮ ಮನೆ ಕೂಡ ದೊಡ್ಡದಾಗಿದೆ. ನಿಮ್ಮ ಮನಸ್ಸನ್ನೂ ದೊಡ್ಡದು ಮಾಡಿಕೊಳ್ಳಿ. ಇಂತಹ ವಿಚಾರವನ್ನೆಲ್ಲಾ ರಾಜಕಾರಣಕ್ಕಾಗಿ ಬಹಿರಂಗಪಡಿಸಬೇಡಿ ಎಂದು ಕೇಜ್ರಿವಾಲ್ ಹೇಳಿದ್ದಾರೆ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...