alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಗೆ ಮಾಜಿ ಪ್ರೇಯಸಿಯನ್ನು ಪರಿಚಯಿಸಿದ್ದೇ ತಪ್ಪಾಯ್ತು

ಗುಜರಾತಿನ ಮೆಹಸಾನದಲ್ಲಿ ದಂಪತಿ ಜಗಳವೊಂದು ಕೋರ್ಟ್ ಮೆಟ್ಟಿಲೇರಿದೆ. ಮದುವೆಯಾಗಿ 7 ವರ್ಷದ ನಂತ್ರ ಪತ್ನಿಗೆ ಪತಿಯ ಹಳೆ ಪ್ರೇಮಿ ನೋಡುವ ಆಸೆಯಾಗಿದೆ. ಮಕ್ಕಳಿರುವ ಪತ್ನಿ ಹಠಕ್ಕೆ ಸೋತ ಪತಿ ತನ್ನ ಹಳೆ ಪ್ರೇಮಿ ಭೇಟಿಗೆ ಅವಕಾಶ ನೀಡಿದ್ದಾನೆ. ಆದ್ರೆ ಪ್ರಕರಣ ಇಷ್ಟಕ್ಕೆ ಮುಗಿಯಲಿಲ್ಲ. ಬುಧವಾರ ಪತ್ನಿ ಕೋರ್ಟ್ ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ.

ಆಗಾಗ ಪತಿಯ ಮಾಜಿ ಪ್ರಿಯತಮೆಯನ್ನು ಭೇಟಿಯಾಗುವ ಆಸೆ ವ್ಯಕ್ತಪಡಿಸುತ್ತಿದ್ದಳಂತೆ ಪತ್ನಿ. ಮದುವೆ ಸಮಾರಂಭವೊಂದರಲ್ಲಿ ಎಲ್ಲರೂ ಒಟ್ಟಿಗೆ ಸೇರಿದ್ದಾರೆ. ಹಳೆ ಗೆಳತಿ ಭೇಟಿ ನಂತ್ರ ಪತ್ನಿ ಬದಲಾಗಿದ್ದಾಳೆ. ಪತಿ ಹಲ್ಲೆ ಮಾಡ್ತಾನೆಂಬ ಆರೋಪ ಹೊರಿಸಿ ಕೋರ್ಟ್ ಮೆಟ್ಟಿಲೇರಿದ್ದಾಳೆ. ಇಬ್ಬರು ವಕೀಲರನ್ನು ಭೇಟಿಯಾಗಿ ಹೇಗಾದ್ರೂ ವಿಚ್ಛೇದನಕೊಡಿಸಿ ಎಂದು ದುಂಬಾಲು ಬಿದ್ದಿದ್ದಾಳೆ.

ವಕೀಲರು ಮಹಿಳೆಗೆ ಬುದ್ದಿ ಹೇಳುವ ಯತ್ನ ನಡೆಸಿದ್ದಾರೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ ವಕೀಲರು ಮಹಿಳೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೋಪ ತಣ್ಣಗಾದ್ಮೇಲೆ ಮಹಿಳೆ ಎಲ್ಲ ಮರೆತು ಪತಿ ಜೊತೆ ಮನೆಗೆ ಹೋಗಲು ಒಪ್ಪಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...