alex Certify
ಕನ್ನಡ ದುನಿಯಾ       Mobile App
       

Kannada Duniya

ರಾಹುಲ್ ಸಹರನ್ಪುರ ಭೇಟಿಗೆ ಅವಕಾಶ ನಿರಾಕರಣೆ

578677-rahul-gandhi-2-pti

ಗಲಭೆ ಪೀಡಿತ ಉತ್ತರಪ್ರದೇಶದ ಸಹರನ್ಪುರಕ್ಕೆ ಭೇಟಿ ನೀಡಲು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಪೊಲೀಸರು ಅವಕಾಶ ನಿರಾಕರಿಸಿದ್ದಾರೆ. ಬಿಎಸ್ಪಿ ನಾಯಕಿ ಮಾಯಾವತಿ ಅವರಿಗೂ ಪೊಲೀಸರು ಅವಕಾಶ ನೀಡಿಲ್ಲ. ಸಹರನ್ಪುರದಲ್ಲಿ ದಲಿತ ಮತ್ತು ಠಾಕೂರ್ ಸಮುದಾಯಗಳ ನಡುವಣ ಘರ್ಷಣೆ ಹಿಂಸಾರೂಪಕ್ಕೆ ತಿರುಗಿತ್ತು.

ಗಲಭೆ ಪೀಡಿತ ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆ ಹಾಗೂ ಸಾಮಾಜಿಕ ತಾಣಗಳನ್ನು ಬ್ಲಾಕ್ ಮಾಡಲಾಗಿತ್ತು. ಸಹರನ್ಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ವರದಿ ನೀಡುವಂತೆ ಕೇಂದ್ರ ಗೃಹ ಸಚಿವಾಲಯ, ಉತ್ತರಪ್ರದೇಶ ಸರ್ಕಾರಕ್ಕೆ ಸೂಚಿಸಿದೆ. ಸಹರನ್ಪುರ ಗಲಭೆ ಒಂದು ವ್ಯವಸ್ಥಿತ ಷಡ್ಯಂತ್ರ ಅಂತಾ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಮೇ 5ರಂದು ಶಬ್ಬಿರ್ಪುರ್ ಗ್ರಾಮದಲ್ಲಿ ರಾಜ ಮಹಾರಾಣಾ ಪ್ರತಾಪ್ ಜಯಂತಿ ಹಿನ್ನೆಲೆಯಲ್ಲಿ ಧ್ವನಿವರ್ಧಕ ಹಾಕಿದ್ದರಿಂದ ದಲಿತರು ಮತ್ತು ರಜಪೂತರ ಮಧ್ಯೆ ಸಂಘರ್ಷ ಶುರುವಾಗಿತ್ತು. ಮಂಗಳವಾರ ರಾತ್ರಿ ಬಿಎಸ್ಪಿ ನಾಯಕಿ ಮಾಯಾವತಿ ಭೇಟಿಯಿಂದ ಮತ್ತೆ ಗಲಭೆ ತೀವ್ರಗೊಂಡು ವ್ಯಕ್ತಿಯೊಬ್ಬ ಮೃತಪಟ್ಟಿದ್ದ, ಹಲವರು ಗಾಯಗೊಂಡಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...