alex Certify
ಕನ್ನಡ ದುನಿಯಾ       Mobile App
       

Kannada Duniya

ಮದ್ಯ ಮಾತ್ರವಲ್ಲ, ಸಿರಪ್, ಟಾನಿಕ್ ಕೂಡ ನಿಷೇಧ

Generic Medicine Bottle with serving accessories

ಪಾಟ್ನಾ: ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮದ್ಯ ಮಾರಾಟ, ಉತ್ಪಾದನೆಯನ್ನು ಸಂಪೂರ್ಣ ನಿಷೇಧಿಸಿದ್ದಾರೆ. ಏಪ್ರಿಲ್ 1ರಿಂದಲೇ ಬಿಹಾರದಲ್ಲಿ ಮದ್ಯವನ್ನು ನಿಷೇಧಿಸಲಾಗಿದೆ.

ಮದ್ಯದ ಜೊತೆಗೆ ಸಿರಪ್, ಟಾನಿಕ್ ಕೂಡ ನಿಷೇಧಿಸುವ ಚಿಂತನೆಯಲ್ಲಿದೆ ಬಿಹಾರ ಸರ್ಕಾರ. ಮದ್ಯ ನಿಷೇಧದ ಬಳಿಕ ಬಿಹಾರದಲ್ಲಿ ಮದ್ಯವ್ಯಸನಿಗಳಿಗೆ ದಿಕ್ಕು ತೋಚದಂತಾಗಿ, ಕೈಗೆ ಸಿಕ್ಕ ವಸ್ತುಗಳನ್ನೆಲ್ಲಾ ಸೇವಿಸಿ ಆಸ್ಪತ್ರೆಗೆ ಸೇರಿದ್ದರು. ಕೆಲವರು ಅಲ್ಕೋಹಾಲ್ ಕಂಟೆಂಟ್ ಇರುವ ಟಾನಿಕ್ ಹಾಗೂ ಸಿರಪ್ ಗಳನ್ನು ಬಳಸುತ್ತಿದ್ದರು. ಇದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಗಮನಕ್ಕೆ ಬಂದಿದೆ. ಈ ಹಿನ್ನಲೆಯಲ್ಲಿ ಅಲ್ಕೋಹಾಲ್ ಅಂಶ ಇರುವ ಟಾನಿಕ್, ಸಿರಪ್ ನಿಷೇಧಿಸಲು ಮುಂದಾಗಿದ್ದಾರೆ.

ಮದ್ಯ ಬ್ಯಾನ್ ಆದ ನಂತರ ಕೊರೆಕ್ಸ್, ಪೆನ್ಸೊಡಿಲ್ ಸೇರಿದಂತೆ ಹಲವು ಔಷಧಿಗಳನ್ನು ಯುವಕರು ಬಳಸುತ್ತಿದ್ದಾರೆ. ಇವುಗಳಲ್ಲಿ ಆಲ್ಕೋಹಾಲ್ ಕಂಟೆಂಟ್ ಇರುವುದರಿಂದ ಬೇಡಿಕೆ ಜಾಸ್ತಿಯಾಗಿದ್ದು, ಮೂರ್ನಾಲ್ಕು ಪಟ್ಟು ಹೆಚ್ಚಿನ ಬೆಲೆಗೆ ಇವುಗಳನ್ನು ಮಾರಾಟ ಮಾಡಲಾಗುತ್ತಿದೆ, ಹಾಗಾಗಿ ಇಂತಹ ಆಲ್ಕೋಹಾಲ್ ಕಂಟೆಂಟ್ ಇರುವ ಸಿರಪ್, ಟಾನಿಕ್ ನಿಷೇಧಿಸಲಾಗುವುದು ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...