alex Certify
ಕನ್ನಡ ದುನಿಯಾ       Mobile App
       

Kannada Duniya

ಕಿಕಿ ಡಾನ್ಸ್ ಮಾಡಿದ ಯುವಕರಿಗೆ ರೈಲು ನಿಲ್ದಾಣ ಸ್ವಚ್ಚಗೊಳಿಸುವ ಶಿಕ್ಷೆ

ಕಿಕಿ ಡ್ಯಾನ್ಸ್ ಮಾಡಿ ಖ್ಯಾತನಾಮರು ಪೇಚಿಗೆ ಸಿಲುಕಿಕೊಂಡಿದ್ದನ್ನು ನೋಡಿದ್ದೇವೆ. ಮುಂಬೈನಲ್ಲಿ ಹೊರಟಿದ್ದ ರೈಲಿನಿಂದ ಇಳಿದು ಕಿಕಿ ಡ್ಯಾನ್ಸ್ ಮಾಡಿದ ಮೂವರಿಗೆ ಕೋರ್ಟ್ ಶಿಕ್ಷೆಯನ್ನು ವಿಧಿಸಿದೆ.

ಚಲಿಸುವ ಕಾರಿನಿಂದ ಕೆಳಗಿಳಿದು, ಬಾಗಿಲನ್ನು ಓಪನ್ ಇಟ್ಟು ಹಾಡಿಗೆ ತಕ್ಕಂತೆ ಡ್ಯಾನ್ಸ್ ಮಾಡುವುದೇ ಕಿಕಿ ಡ್ಯಾನ್ಸ್. ಈಗ ಈ ಡ್ಯಾನ್ಸನ್ನು ಮೂವರು ಚಲಿಸುತ್ತಿದ್ದ ರೈಲಿನಿಂದ ಇಳಿದು ಮಾಡಿದ್ದಾರೆ. ಅಲ್ಲದೆ ಈ ವಿಡಿಯೋ ಸಕತ್ ವೈರಲ್ ಆಗಿದೆ. ಈ ದೃಶ್ಯ ಸಾಮಾಜಿಕ ತಾಣದಲ್ಲಿ ಸದ್ದು ಮಾಡುತ್ತಿದ್ದಂತೆ ರೈಲ್ವೆ ಪೊಲೀಸರು, ಕಿಕಿ ಡ್ಯಾನ್ಸ್ ಮಾಡಿದವರನ್ನು ಬಂಧಿಸಿ, ರೈಲ್ವೆ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

ಬಂಧಿತ ಶ್ಯಾಮ್ ಶರ್ಮಾ(24), ನಿಶಾಂತ್ (20) ಹಾಗೂ ಧೃವಾ (23)ರಿಗೆ ನ್ಯಾಯಾಲಯ, ಮೂರು ದಿನಗಳ ಕಾಲ ರೈಲ್ವೆ ನಿಲ್ದಾಣವನ್ನು ಶುಚಿಗೊಳಿಸುವಂತೆ ತಿಳಿಸಿದೆ. ಅಲ್ಲದೆ ಪ್ರಯಾಣಿಕರಲ್ಲಿ ಕಿಕಿ ಸವಾಲು ತೆಗೆದುಕೊಳ್ಳದಂತೆ ಎಚ್ಚರಿಕೆ ವಹಿಸುವಂತೆ ತಿಳಿಸಲು ಆದೇಶಿಸಿದೆ. ಮೂವರು ಯುವಕರು ಕ್ಲೀನ್ ಮಾಡುವ ದೃಶ್ಯವನ್ನು ಶೂಟ್ ಮಾಡಿ, ಕೋರ್ಟ್ ಗೆ ತೋರಿಸಬೇಕು ಎಂದು ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...