alex Certify
ಕನ್ನಡ ದುನಿಯಾ       Mobile App
       

Kannada Duniya

ಪೂರ್ತಿ ತಿಂಗಳ ಸಂಬಳವಾಗಿ ಸಿಕ್ತು 6 ರೂ…!

ಭಾರತದಲ್ಲಿ ನಿರುದ್ಯೋಗ ಸಮಸ್ಯೆಯಿದೆ. ವಿದ್ಯಾರ್ಹತೆ ಯಾವುದೇ ಇರಲಿ ಕೆಲಸ ಸಿಕ್ಕರೆ ಸಾಕು ಎನ್ನುವವರ ಸಂಖ್ಯೆ ಹೆಚ್ಚಿದೆ. ಅನೇಕರು ಕಡಿಮೆ ಸಂಬಳಕ್ಕೆ ಕೆಲಸ ಮಾಡ್ತಿದ್ದಾರೆ. ಕಡಿಮೆ ಸಂಬಳವೂ ಸರಿಯಾಗಿ ಸಿಕ್ತಿಲ್ಲವೆಂದ್ರೆ ಉದ್ಯೋಗಿಗಳ ಸ್ಥಿತಿ ಏನಾಗಬೇಡ. ತಿಂಗಳ ಸಂಬಳ ನಂಬಿ ಜೀವನ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬ ಕಂಪನಿ ನೀಡಿದ ಸಂಭಾವನೆ ನೋಡಿ ದಂಗಾಗಿದ್ದಲ್ಲದೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಉತ್ತರ ಪ್ರದೇಶದ ಆಗ್ರಾದಲ್ಲಿ ಈ ಘಟನೆ ನಡೆದಿದೆ. ತಿಂಗಳ ಪೂರ್ತಿ ಕೆಲಸ ಮಾಡಿದ ಸಿಬ್ಬಂದಿಗೆ ಕಂಪನಿ ಕೇವಲ 6 ರೂಪಾಯಿ ನೀಡಿದೆ. ಇದ್ರಿಂದ ನಿರಾಸೆಗೊಂಡ ಯುವಕ ಕಾರ್ಖಾನೆಯಲ್ಲಿಯೇ ನೇಣು ಬಿಗಿದುಕೊಂಡಿದ್ದಾನೆ. ಅಲ್ಲಿದ್ದ ಇತರ ಸಿಬ್ಬಂದಿ ಆತನನ್ನು ರಕ್ಷಿಸಿದ್ದಾರೆ.

ಜೂನ್ ತಿಂಗಳಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಯುವಕನಿಗೆ ಅಪಘಾತವಾಗಿತ್ತಂತೆ. ಆತನ ಆಸ್ಪತ್ರೆ ಖರ್ಚನ್ನು ಕಾರ್ಖಾನೆ ಮಾಲೀಕ ನೀಡಿದ್ದನಂತೆ. ಕೆಲಸಕ್ಕೆ ವಾಪಸ್ ಬಂದ ವ್ಯಕ್ತಿಗೆ ಖರ್ಚು ಮುರಿದುಕೊಂಡು 6 ರೂಪಾಯಿ ನೀಡಲಾಗಿದೆ. ಪ್ರತಿ ತಿಂಗಳು ಸಂಬಳದಲ್ಲಿ ಕಟ್ ಮಾಡಿ. ಒಂದೇ ಬಾರಿ ಸಂಬಳ ಕಟ್ ಮಾಡಿದ್ರೆ ಕಷ್ಟವೆಂದು ಸಿಬ್ಬಂದಿ ಹೇಳಿದ್ದಾನೆ. ಇದಕ್ಕೆ ಮಾಲೀಕರು ಒಪ್ಪಿಗೆ ನೀಡಲಿಲ್ಲ. ಮನನೊಂದು ಸಿಬ್ಬಂದಿ ಬುಧವಾರ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...