alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನ ಸಿಬ್ಬಂದಿಯೊಂದಿಗೆ ಜಗಳವಾಡಿದವನು ಮಾಡಿದ್ದೇನು ಗೊತ್ತಾ…?

ಜೈಪುರದಿಂದ ದೆಹಲಿಗೆ ಹೊರಟಿದ್ದ ಖಾಸಗಿ ಇಂಡಿಗೋ ವಿಮಾನದ ಪ್ರಯಾಣ, ವ್ಯಕ್ತಿಯೊಬ್ಬನಿಂದಾಗಿ 40 ನಿಮಿಷ ತಡವಾದ ಘಟನೆ ಜೈಪುರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂಬ ಹುಸಿ ಬೆದರಿಕೆಯಿಂದಾಗಿ ವಿಮಾನ ನಿಲ್ದಾಣದ ಸಿಬ್ಬಂದಿ ಮತ್ತು ಪ್ರಯಾಣಿಕರು ಪೇಚಿಗೆ ಸಿಲುಕಿದ್ದಾರೆ. ಈ ಸಂಬಂಧ ಜೆ.ಪಿ. ಚೌಧರಿ ಎಂಬ ವ್ಯಕ್ತಿಯನ್ನ ಹುಸಿ ಬಾಂಬ್ ಬೆದರಿಕೆ ಒಡ್ಡಿದ ಆರೋಪದಲ್ಲಿ ಬಂಧಿಸಲಾಗಿದೆ.

ವಿಮಾನ ನಿಲ್ದಾಣದ ಸಿಬ್ಬಂದಿಯೊಂದಿಗೆ ಜಗಳವಾಡಿದ ಚೌಧರಿ ತನ್ನ ಲಗೇಜ್ ನಲ್ಲಿ ಬಾಂಬ್ ಇದೆ ಎಂದು ಸಿಬ್ಬಂದಿಯ ಜೊತೆ ತಗಾದೆ ತೆಗೆದ. ಆನಂತರದಲ್ಲಿ ಆತನ ಲಗೇಜ್ ತುಂಬಿದ್ದ ಬ್ಯಾಗ್ ಚೆಕ್ ಮಾಡಲಾಯ್ತು. ಆದ್ರೆ ಅದರಲ್ಲಿ ಬಾಂಬ್ ಇರಲಿಲ್ಲ. ಇದರಿಂದಾಗಿ ಬೆಳಗ್ಗೆ 10.40ಕ್ಕೆ ಪ್ರಯಾಣ ಶುರುಮಾಡಬೇಕಿದ್ದ ವಿಮಾನ ಟೇಕಾಫ್ ಆಗಿದ್ದು ಬೆಳಗ್ಗೆ 11.23ರ ವೇಳೆಗೆ.

ಸುಳ್ಳು ಬೆದರಿಕೆ ಒಡ್ಡಿದ ಆರೋಪದಲ್ಲಿ ಜೆ.ಪಿ. ಚೌಧರಿಯ ಪ್ರಯಾಣಕ್ಕೆ ಖಾಸಗಿ ವಿಮಾನ ಸಿಬ್ಬಂದಿ ಅನುಮತಿ ನಿರಾಕರಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಪ್ರಯಾಣಕ್ಕೆ ಅಡ್ಡಿಪಡಿಸಿದ ಹಿನ್ನಲೆಯಲ್ಲಿ ಚೌಧರಿಯ ವಿರುದ್ಧ ಪೊಲೀಸರು ಎಫ್ಐಆರ್ ಕೂಡ ದಾಖಲಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...