alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ಮನೆಯಲ್ಲಿ ಜಗಳ, ಪೊಲೀಸ್ ಠಾಣೆಯಲ್ಲಿ ಸಪ್ತಪದಿ

ಉತ್ತರ ಪ್ರದೇಶದ ಕನೌಜ್ ನಲ್ಲಿ ಮದುವೆ ಮನೆಯೊಂದರಲ್ಲಿ ಇಬ್ಬರ ಮಧ್ಯೆ ಕಿತ್ತಾಟ ತಾರಕಕ್ಕೇರಿತ್ತು. ಖುದ್ದು ವಧು-ವರರೇ ದೂರು ದಾಖಲಿಸಲು ಪೊಲೀಸ್ ಠಾಣೆಗೆ ಬರಬೇಕಾಯ್ತು. ಈ ಘರ್ಷಣೆಯನ್ನು ನೋಡಿ ಬೇಸತ್ತ ವಧುವಿನ ಕಡೆಯವರು ಮದುವೆಯನ್ನೇ ರದ್ದು ಮಾಡಲು ಮುಂದಾಗಿದ್ರು.

ವಧುವಿನ ಸಂಬಂಧಿಕರೊಬ್ಬರಿಗೆ ಯಾರೋ ಕಪಾಳ ಮೋಕ್ಷ ಮಾಡಿದ್ದೇ ಇಷ್ಟೆಲ್ಲಾ ಗದ್ದಲಕ್ಕೆ ಕಾರಣ. ವಧು ಹಾಗೂ ವರನ ಕುಟುಂಬಸ್ಥರ ಮಧ್ಯೆ ಇದೇ ವಿಚಾರ ಸಂಘರ್ಷ ಮೂಡಿಸಿತ್ತು. ಪರಸ್ಪರ ಒಮ್ಮತಕ್ಕೆ ಬರಲು ಸಾಧ್ಯವಾಗಲೇ ಇಲ್ಲ. ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ರು.

ಪೊಲೀಸರು ಮಧ್ಯಸ್ಥಿಕೆ ವಹಿಸಿ ಉಭಯ ಕುಟುಂಬಗಳ ಮಧ್ಯೆ ರಾಜಿ ಮಾಡಿಸಿದ್ದಾರೆ. ಅಷ್ಟೇ ಅಲ್ಲ ಮದುವೆಯಾಗುವಂತೆ ವಧು-ವರರ ಮನವೊಲಿಸಿದ್ದಾರೆ. ಕೊನೆಗೆ ಯುವ ಜೋಡಿ ಪೊಲೀಸ್ ಠಾಣೆಯಲ್ಲೇ ಸಪ್ತಪದಿ ತುಳಿದು ಹೊಸ ಬಾಳಿಗೆ ಅಡಿಯಿಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...