alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಮೂಹಿಕ ಅತ್ಯಾಚಾರ ಪ್ರಕರಣದ ಮೂವರು ಆರೋಪಿಗಳ ಅರೆಸ್ಟ್

ಹರಿಯಾಣದಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ ಪ್ರಕರಣ ಎರಡು ದಿನಗಳ ಬಳಿಕ ಬೆಳಕಿಗೆ ಬಂದಿದ್ದು, 19 ವರ್ಷದ ಯುವತಿಯನ್ನು‌ ಕಿಡ್ನಾಪ್ ಮಾಡಿ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ.

ಮಹೇಂದ್ರ ಘರ್ ಜಿಲ್ಲೆಯಲ್ಲಿ ಪ್ರಕರಣ ನಡೆದಿದ್ದು, ಅತ್ಯಾಚಾರಕ್ಕೆ ಒಳಗಾದ ಯುವತಿಯ ಆರೋಪದ ಮೇರೆ ಈಗಾಗಲೇ ಮೂವರನ್ನು‌ ಬಂಧಿಸಲಾಗಿದೆ. ಆದರೆ ದೂರಿನಲ್ಲಿ ಯುವತಿಯ ಮೇಲೆ ಎಂಟರಿಂದ 10 ಜನ ಅತ್ಯಾಚಾರ ಎಸಗಿದ್ದಾರೆ ಎಂದಿರುವ ಕಾರಣ ಉಳಿದ‌ ಆರೋಪಿಗಳ ಬಂಧನಕ್ಕೆ ವಿಶೇಷ ತಂಡವನ್ನು ರಚಿಸಲಾಗಿದೆ.

ಕೋಚಿಂಗ್ ತರಗತಿಯನ್ನು ಮುಗಿಸಿ ಮನೆಗೆ ವಾಪಾಸಾಗಲು ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ವೇಳೆ ಯುವಕರ ಗುಂಪು ಯುವತಿಯನ್ನು ಕಿಡ್ನಾಪ್ ಮಾಡಿದೆ. ಯುವತಿ ಮೇಲೆ ಅತ್ಯಾಚಾರ ನಡೆಸುವಾಗ ಮಾದಕ ವಸ್ತುವನ್ನು ಆರೋಪಿಗಳು ನೀಡಿದ್ದಾರೆ. ಆದ್ದರಿಂದ ಯುವತಿ ಮೂವರ ಹೆಸರನ್ನು ಮಾತ್ರ ಹೇಳಿದ್ದು, ಉಳಿದವರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಸಂತ್ರಸ್ತೆಯನ್ನು ಹರಿಯಾಣ ಮಹಿಳಾ ಆಯೋಗದ ಅಧ್ಯಕ್ಷೆ ಭೇಟಿಯಾಗಿದ್ದಾರೆ‌. ಇನ್ನು ವಿರೋಧ ಪಕ್ಷಗಳು ರಾಜ್ಯದಲ್ಲಿ ನಡೆಯುತ್ತಿರುವ ಅತ್ಯಾಚಾರದ ಬಗ್ಗೆ ಕ್ರಮ ಕೈಗೊಳ್ಳಲು ಸರಕಾರ ವಿಫಲವಾಗಿದೆ ಎಂದು ಆರೋಪಿಸಿದ್ದು, ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...