alex Certify
ಕನ್ನಡ ದುನಿಯಾ       Mobile App
       

Kannada Duniya

ಜಾರ್ಖಂಡ್ ಇಲಿಗಳಿಂದಾಗಿದೆ ಇಂತಹ ಕೃತ್ಯ..!

ಧನಬಾದ್: ಹಿಂದೆ ಬಿಹಾರದ ಇಲಿಗಳು ಬರೋಬ್ಬರಿ 9 ಲಕ್ಷ ಲೀಟರ್ ಮದ್ಯ ಸೇವಿಸಿ ಸುದ್ದಿಯಾಗಿದ್ದವು. ಈಗ ಬರೋಬ್ಬರಿ 45 ಕೆ.ಜಿ. ಮಾರಿಜುವಾನಾ ಮಾದಕ ವಸ್ತು ಸೇವಿಸುವ ಮೂಲಕ ಜಾರ್ಖಂಡ್ ಇಲಿಗಳು ಗಮನ ಸೆಳೆದಿವೆ.

ಆರೋಪಿಯಿಂದ ವಶಪಡಿಸಿಕೊಂಡಿದ್ದ 145 ಕೆ.ಜಿ. ಗಾಂಜಾದಲ್ಲಿ 45 ಕೆ.ಜಿ.ಯಷ್ಟು ಗಾಂಜಾವನ್ನು ಇಲಿಗಳು ತಿಂದಿರುವುದಾಗಿ ಪೊಲೀಸರು ನ್ಯಾಯಾಲಯಕ್ಕೆ ವರದಿ ನೀಡಿದ್ದಾರೆ.

ಬಿಹಾರದ ಬೋಜಪುರ ಜಗದೀಶ್ ಪುರದ ಶಿವಾಜಿ ಕುಮಾರ್ 2016 ರಲ್ಲಿ ಬೈಕ್ ನಲ್ಲಿ 145 ಕೆ.ಜಿ. ಗಾಂಜಾ ಸಾಗಿಸುವಾಗ ಜಾರ್ಖಂಡ್ ನ ಧನಬಾದ್ ಜಿಲ್ಲೆಯ ಬರ್ವಾಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದ್ದ ಮಾರಿಜುವಾನಾ ಗಾಂಜಾವನ್ನು ಠಾಣೆಯ ದಾಸ್ತಾನು ಕೊಠಡಿಯಲ್ಲಿ ಇಡಲಾಗಿದೆ. ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಕೋರ್ಟ್, ವಶಪಡಿಸಿಕೊಳ್ಳಲಾದ ಗಾಂಜಾ ಹಾಜರುಪಡಿಸಲು ಸೂಚಿಸಿದೆ. 100 ಕೆ.ಜಿ. ಗಾಂಜಾವನ್ನು ಮಾತ್ರ ತಂದ ಪೊಲೀಸರು 45 ಕೆ.ಜಿ. ಗಾಂಜಾವನ್ನು ಇಲಿಗಳು ತಿಂದಿವೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...