alex Certify
ಕನ್ನಡ ದುನಿಯಾ       Mobile App
       

Kannada Duniya

ಉಪವಾಸದ ನಡುವೆ ಲಘು ಉಪಹಾರ ಸವಿದ ಬಿಜೆಪಿ ಶಾಸಕರು

ಪ್ರತಿಪಕ್ಷಗಳು ಸಂಸತ್ ಬಜೆಟ್ ಅಧಿವೇಶನವನ್ನು ಸುಗಮವಾಗಿ ನಡೆಸಲು ಬಿಡದ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುವಾರದಂದು ಉಪವಾಸ ಕೈಗೊಂಡಿದ್ದು, ಇದನ್ನು ಬೆಂಬಲಿಸಿ ಬಿಜೆಪಿ ಚುನಾಯಿತ ಪ್ರತಿನಿಧಿಗಳು, ಪದಾಧಿಕಾರಿಗಳು ತಾವೂ ಉಪವಾಸ ನಡೆಸಿದ್ದರು.

ಈ ಹಿಂದೆ ಕಾಂಗ್ರೆಸ್ ಪಕ್ಷದ ವತಿಯಿಂದ ಕೈಗೊಳ್ಳಲಾಗಿದ್ದ ಉಪವಾಸದ ವೇಳೆ ಉಪವಾಸ ಆರಂಭಕ್ಕೂ ಮುನ್ನ ಕೆಲ ಕಾಂಗ್ರೆಸ್ ಮುಖಂಡರು ರೆಸ್ಟೋರೆಂಟ್ ಒಂದರಲ್ಲಿ ಉಪಹಾರ ಸವಿದಿದ್ದು, ಈ ಫೋಟೋಗಳು ವೈರಲ್ ಆದ ಬಳಿಕ ಉಪವಾಸ ಪ್ರಹಸನಕ್ಕೆ ಅಣಕ ವ್ಯಕ್ತವಾಗಿತ್ತು.

ಈ ಹಿನ್ನಲೆಯಲ್ಲಿ ಬಿಜೆಪಿ ನಾಯಕರ ಉಪವಾಸದ ವೇಳೆ ಇಂತಹ ಪ್ರಮಾದವಾಗದಂತೆ ಎಚ್ಚರಿಕೆ ವಹಿಸಲಾಗಿತ್ತಾದರೂ ಉಪವಾಸದ ನಡುವೆಯೂ ಮಹಾರಾಷ್ಟ್ರದ ಇಬ್ಬರು ಬಿಜೆಪಿ ಶಾಸಕರು ಸ್ನಾಕ್ಸ್, ಚಿಪ್ಸ್ ಸವಿದಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ಕಾಂಗ್ರೆಸ್ ನವರ ಟೀಕೆಗೆ ತುತ್ತಾಗಿದೆ.

ಪುಣೆಯಲ್ಲಿ ಸಚಿವ ಗಿರೀಶ್ ಬಾಪಟ್ ನೇತೃತ್ವದಲ್ಲಿ ನಡೆಯುತ್ತಿದ್ದ ಸಭೆ ವೇಳೆ ಶಾಸಕರುಗಳಾದ ಭೀಮರಾವ್ ಟಪ್ಕಿರ್ ಹಾಗೂ ಸಂಜಯ್ ಬಿಗಾಡೆ ಸ್ನಾಕ್ಸ್ ಸವಿದಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್, ಉಪವಾಸ ಆರಂಭಕ್ಕೂ 3 ಗಂಟೆ ಮುನ್ನ ಕಾಂಗ್ರೆಸ್ ನಾಯಕರು ಉಪಹಾರ ಸೇವಿಸಿದ್ದಕ್ಕೆ ಟೀಕೆ ಮಾಡಿದ್ದ ಬಿಜೆಪಿಯವರು ಈಗ ತಮ್ಮ ಪಕ್ಷದ ಶಾಸಕರು ಉಪವಾಸದ ನಡುವೆ ಲಘು ಉಪಹಾರ ಸೇವಿಸಿರುವುದಕ್ಕೆ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...