alex Certify
ಕನ್ನಡ ದುನಿಯಾ       Mobile App
       

Kannada Duniya

ನಾಯ್ಡು ಬಳಿಕ ಮೋದಿ ಸರ್ಕಾರಕ್ಕೆ ಟಾಂಗ್ ಕೊಟ್ಟ ದೀದಿ

ರಾಜ್ಯ ಸರ್ಕಾರದ ಅನುಮತಿಯಿಲ್ಲದೆ ಸಿಬಿಐ ಯಾವುದೇ ದಾಳಿ ಅಥವಾ ತನಿಖೆ ನಡೆಸುವಂತಿಲ್ಲ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಘೋಷಿಸಿ ಗಂಟೆಯೊಳಗಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಇದೇ ನಿರ್ಧಾರಕ್ಕೆ ಬಂದಿದ್ದಾರೆ.

ಕೇಂದ್ರ ತನಿಖಾ ದಳ(ಸಿಬಿಐ) ನಿಯಮ ಪ್ರಕಾರ ಅದು ದೆಹಲಿ ಹೊರತುಪಡಿಸಿ ಇನ್ನಾವುದೇ ರಾಜ್ಯದಲ್ಲಿ ವಿಚಾರಣೆ ನಡೆಸುವುದಾದರೂ ಆಯಾ ರಾಜ್ಯ ಸರ್ಕಾರಗಳ ಅನುಮತಿ ಪಡೆದೇ ಮುಂದುವರಿಯಬೇಕು. ಆದರೆ 1989ರಲ್ಲಿ ಪಶ್ಚಿಮ ಬಂಗಾಳ ಸರ್ಕಾರ ಈ ನಿಯಮವನ್ನು ಬದಿಗೊತ್ತಿ ಸಿಬಿಐಗೆ ರಾಜ್ಯದಲ್ಲಿ ಮುಕ್ತ ಅವಕಾಶ ಕಲ್ಪಿಸಿತ್ತು.

ಇದೀಗ ಚಂದ್ರಬಾಬು ನಾಯ್ಡು ಸರ್ಕಾರದ ನಿರ್ಧಾರವನ್ನು ಬೆಂಬಲಿಸಿರುವ ಮಮತಾ ಬ್ಯಾನರ್ಜಿ, ತಾವೂ ರಾಜ್ಯದಲ್ಲಿ ಸಿಬಿಐಗೆ ಬೇಕಾಬಿಟ್ಟಿ ಪ್ರವೇಶಿಸಲು ಬಿಡೋಲ್ಲ ಎಂದಿದ್ದಾರೆ.

ಸಿಬಿಐಗೆ ರಾಜ್ಯಕ್ಕೆ ಪ್ರವೇಶಿಸಲು ಅನುಮತಿ ನೀಡುವುದಿಲ್ಲ ಎಂಬ ಚಂದ್ರಬಾಬು ನಾಯ್ಡು ನಿರ್ಧಾರ ಸರಿಯಾಗಿದೆ. ಬಿಜೆಪಿ ನೋಟ್ ಚೇಂಜರ್ ಆಗಿರಬಹುದು, ಆದರೆ ಗೇಮ್ ಚೇಂಜರ್ ಅಲ್ಲ ಎಂದು ಟಾಂಗ್ ನೀಡಿದ್ದಾರೆ .

ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಎನ್.ಡಿ.ಎ. ಸರ್ಕಾರ ಸಿಬಿಐ ದುರ್ಬಳಕೆ ಮಾಡುತ್ತಿದೆ ಎಂದು ಕಾಂಗ್ರೆಸ್ ಹಾಗೂ ತೃತೀಯ ರಂಗದ ಪಕ್ಷಗಳ ಆರೋಪ ಕೇಳಿ ಬಂದಿರುವ ಬೆನ್ನಿಗೇ ತೃತೀಯ ರಂಗದ ಈ ಇಬ್ಬರು ಪ್ರಮುಖ ನೇತಾರರು ತಮ್ಮ ರಾಜ್ಯದಲ್ಲಿ ಸಿಬಿಐಗೆ ಮೂಗುದಾರ ತೊಡಿಸಲು ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...